ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಮೂಲದ 'ಡಾ.ಡೆತ್' ಅಮೆರಿಕದಲ್ಲಿ ಬಂಧನ
ನರಮೇಧದ ಆರೋಪ ಮತ್ತು ನಿರ್ಲಕ್ಷ್ಯದಿಂದಾಗಿ ಆಸ್ಟ್ರೇಲಿಯಾದಲ್ಲಿ 17 ರೋಗಿಗಳ ಸಾವಿಗೆ ಕಾರಣನಾದ ಆರೋಪ ಎದುರಿಸುತ್ತಿರುವ 'ಡಾ.ಡೆತ್' ಎಂಬ ಕುಖ್ಯಾತಿ ಪಡೆದಿದ್ದ ಭಾರತೀಯ ಮೂಲದ ಸರ್ಜನ್ ಜಯಂತ್ ಪಟೇಲ್‌ನನ್ನು ಅಮೆರಿಕದ ಒಗೆರಾನ್ ರಾಜ್ಯದಿಂದ ಎಫ್‌ಬಿಐ ಬಂಧಿಸಿದೆ.

ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ಎದುರಿಸಬೇಕಿರುವ 57ರ ಹರೆಯದ ಪಟೇಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಾಳೆ ನಡೆಯಲಿದೆ. ಅಂತೆಯೇ ಈ 'ಸಾವಿನ ವೈದ್ಯ'ನನ್ನು ಆಸ್ಟ್ರೇಲಿಯಾಕ್ಕೆ ಗಡೀಪಾರು ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ಏಪ್ರಿಲ್ 10ರಂದು ನಡೆಯಲಿದೆ.

2003ರಿಂದ ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್ ರಾಜ್ಯದ ಬಂಡಾಬರ್ಗ್ ಬೇಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪಟೇಲ್, 2005ರ ಏಪ್ರಿಲ್ ತಿಂಗಳಲ್ಲಿ ಅಮೆರಿಕಕ್ಕೆ ಪರಾರಿಯಾಗಿದ್ದ. ತನಿಖೆಯೊಂದರ ಸಂದರ್ಭ ಈತನ ನಿರ್ಲಕ್ಷ್ಯದಿಂದಾಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದು ಬೆಳಕಿಗೆ ಬಂದ ಒಂದು ತಿಂಗಳಲ್ಲೇ ಆತ ಓಡಿಹೋಗಿದ್ದ.


ಒರೆಗಾನ್ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಪಟೇಲ್ ಮೇಲೆ ಮೂರು ಪಟ್ಟು ನರಮೇಧ, ಮೂರು ಪಟ್ಟು ಭಯಾನಕ ದೈಹಿಕ ಹಲ್ಲೆ, ಎರಡು ನಿರ್ಲಕ್ಷ್ಯ, ಐದು ಪಟ್ಟು ವಂಚನೆ, ಹಾಗೂ ಇನ್ನೆರಡು 5000 ಡಾಲರ್‌ಗೂ ಹೆಚ್ಚು ಮೊತ್ತದ ವಂಚನೆಗಳು ಮತ್ತು ಒಂದು ವಂಚನೆ ಯತ್ನ ಪ್ರಕರಣಗಳು ದಾಖಲಾಗಿವೆ.

ನರಮೇಧಕ್ಕಿರುವ ಗರಿಷ್ಠ ಶಿಕ್ಷೆಯೆಂದರೆ ಜೀವಾವಧಿ ಸಜೆ. ಇತರ ಆರೋಪಗಳಿಗೆ ಎರಡೂವರೆಯಿಂದ 14 ವರ್ಷಗಳಷ್ಟು ಕಾರಾಗೃಹ ಶಿಕ್ಷೆ ದೊರೆಯಬಹುದು. ಗುಜರಾತಿನ ಜಾಮ್‌ನಗರದವನಾಗಿರುವ ಪಟೇಲ್, 1977ರಲ್ಲಿ ಅಮೆರಿಕಕ್ಕೆ ತೆರಳಿದ್ದ ಮತ್ತು ಅಲ್ಲಿಯೂ ಸರ್ಜರಿ ನಡೆಸುವುದಕ್ಕೆ ಆತನ ಮೇಲೆ ಅಮೆರಿಕವು ನಿಷೇಧ ಹೇರಿತ್ತು. ಆನಂತರ ಪಟೇಲ್ ಆಸ್ಟ್ರೇಲಿಯಾಗೆ ತೆರಳಿದ್ದ.
ಮತ್ತಷ್ಟು
ಸುದ್ದಿಮೂಲ ಬಹಿರಂಗಪಡಿಸುವವರೆಗೂ ದಂಡ!
ಶೇಕ್ ಹಸೀನಾ ಆಸ್ಪತ್ರೆಗೆ ದಾಖಲು
ಮಿಸ್ಸಿಸಿಪ್ಪಿಯಲ್ಲಿ ಒಬಾಮ ಗೆಲುವು
ಭುಟ್ಟೋಹತ್ಯೆ ನಡೆಸಲು ತಮ್ಮನಿನ್ನೂ ಚಿಕ್ಕವ: ಒಮರ್
ಮಾ.17ರಂದು ಸಂಸದೀಯ ಸಭೆಗೆ ಮುಶ್ ಕರೆ
ಪಾಕ್: ಸರಣಿ ಸ್ಫೋಟ, 23 ಸಾವು