ಯುರೋಪಿಯನ್ ಸಂಸತ್ತಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಸ್ಟ್ರಾಸ್‌ಬೌರ್ಗ್‌ನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಯುರೋಪ್ ಸಂಸತ್ತಿನ ಅಧ್ಯಕ್ಷ ಹನ್ಸ್-ಗರ್ಟ್ ಪೊಟ್ಟರಿಂಗ್ , ಸ್ಲೋವೇನಿಯಾದ ಪ್ರಧಾನಿ ಜಾನೆಜ್ ಜಾನ್ಸ್ ಅವರುಗಳು ಯುರೋಪ್ ಸಂಸತ್ ಕುರಿತಂತೆ ಮಾತನಾಡಿದರು.
ಸಭಾಗಂಣದಲ್ಲಿ ಸಂಗೀತದೊಂದಿಗೆ ಆರಂಭವಾದ ಆಚರಣೆಯ ನಂತರ ಮಾತನಾಡಿದ ಸಂಸತ್ತಿನ ಅಧ್ಯಕ್ಷ ಪೊಟರಿಂಗ್ ಸಂಸತ್ತಿನ ಜವಾಬ್ದಾರಿ ಹೆಚ್ಚಾಗುತ್ತಾ ಸಾಗಿದೆ ಎಂದರು.
ಯುರೋಪ್‌ನ 500 ಮಿಲಿಯನ್ ಜನರ ಜನಪ್ರತಿನಿಧಿಗಳಾಗಿದ್ದು ಯುರೋಪ್ ರಾಜಕೀಯದಲ್ಲಿ ಪ್ರಮುಖ ಮುಂದಾಳುಗಳಾಗಿದ್ದೇವೆ ಎಂದು ನುಡಿದರು.
1958ರಲ್ಲಿ ಆರಂಭವಾದ ಯುರೋಪ್ ಸಂಸತ್ ಕಳೆದ 50 ವರ್ಷಗಳಿಂದ ನಿರಂತರವಾಗಿ ಏಕತೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಾಗಿದೆ ಎಂದು ಸ್ಲೋವೇನಿಯಾದ ಪ್ರದಾನಿ ಜಾನ್ಸಾ ಹೇಳಿದರು.
|