ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಸೇರಿದಂತೆ ಅಮೆರಿಕ ಸರಕಾರದಲ್ಲಿರುವ ವ್ಯಕ್ತಿಗಳು ಇರಾಕ್‌ನೊಂದಿಗೆ ಯುದ್ದವನ್ನು ಬಯಸುತ್ತಿಲ್ಲ ಎಂದು ವಕ್ತಾರ ದಾನಾ ಪೆರಿನೊ ಅವರು ತಿಳಿಸಿದ್ದಾರೆ.
ಇರಾನ್ ದೇಶದೊಂದಿಗೆ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಅಮೆರಿಕ ಸಿದ್ದವಾಗಿದೆ ಎಂದು ದಾನಾ ತಿಳಿಸಿದ್ದಾರೆ.
ಅಡ್ಮಿರಲ್ ವಿಲಿಯಮ್ ಫಾಲನ್ ಟೆಹರಾನ್ ಅಣುಕಾರ್ಯಕ್ರಮಗಳ ಕುರಿತಂತೆ ಅಧ್ಯಕ್ಷ ಬುಷ್ ತಳೆದ ನಿಲುವಿನಿಂದಾಗಿ ರಾಜೀನಾಮೆ ನೀಡಿದ್ದಾರೆ ಎನ್ನುವುದು ಮೂರ್ಖತನದ ಅನಿಸಿಕೆಯಾಗಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ಜಾರ್ಜ್ ಬುಷ್ ಜಗತ್ತಿನಯಾವುದೇ ದೇಶದೊಂದಿಗೆ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಯಸುತ್ತಾರೆ ಹೊರತು ಯುದ್ದದಿಂದಲ್ಲ ಎನ್ನುವುದನ್ನು ಅರಿಯಬೇಕು ಎಂದು ದಾನಾ ಹೇಳಿದ್ದಾರೆ.
|