ಅಫಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ವಿದೇಶಿ ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಹತ್ಯಾ ಕಾರ್‌ಬಾಂಬ್ ದಾಳಿಯಲ್ಲಿ ಆರು ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ರು ತಿಳಿಸಿದ್ದಾರೆ.
ಅಮೆರಿಕದ ಮಿತ್ರಪಡೆಗಳ ಮೇಲೆ ಕಾರ್‌ಬಾಂಬ್ ದಾಳಿ ನಡೆಸಿದಾಗ ಆರು ಮಂದಿ ಹತರಾಗಿ 18 ಮಂದಿಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿ ಜನರಲ್ ಸಲೀಮ್ ಅಹಸಾಸ್ ಹೇಳಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಅಮೆರಿಕ ಮಿತ್ರಪಡೆಗಳ ಮೇಲೆ ನಡೆಸಿದ ದಾಳಿ ವಿಫಲವಾಗಿದೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ ಎಂದು ಜನರಲ್ ಅಹಸಾಸ್ ಹೇಳಿದ್ದಾರೆ.
ಬೆಳಗಿನ ಜನಸಂದಣಿಯ ಸಂದರ್ಭದಲ್ಲಿ ನಡೆದ ಬಾಂಬ್ ಸ್ಪೋಟದಿಂದಾಗಿ 10 ಕಾರುಗಳು ಹಾನಿಗೀಡಾಗಿವೆ ಎಂದು ಅಪರಾಧ ತನಿಖೆ ವಿಭಾಗದ ಮುಖ್ಯಸ್ಥ ಜನರಲ್ ಅಲಿ ಶಾಹ್ ಪಕ್ತಿಯಾವಾಲ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|