ಇಂಗ್ಲೆಂಡಿನಲ್ಲಿ ಭಯೋತ್ಪಾದನೆ ಆರೋಪದಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ ಭಾರತೀಯ ಮೂಲದ ವೈದ್ಯ ಹನೀಫ್ ಪ್ರಕರಣವನ್ನು ಕೂಲಂಕೂಷ ತನಿಖೆ ಮಾಡಲು ಆಸ್ಟ್ರೇಲಿಯಾ ಸರಕಾರ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ನ್ಯೂ ಸೌಥ್ ವೆಲ್ಸ್‌ನಲ್ಲಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಜಾನ್ ಕ್ಲರ್ಕೆ ಅವರು ಮಾಜಿ ವಲಸೆ ಸಚಿವರಾಗಿದ್ದ ಕೆವಿನ್ ಅಂಡ್ರೂಸ್ ಹಾಗೂ ಪೊಲೀಸ್ ಮುಖ್ಯಸ್ಥ ಮಿಕ್ ಕಿಲ್ಟಿ ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಮಾಜಿ ವಲಸೆ ಸಚಿವರಾಗಿದ್ದ ಕೆವಿನ್ ಅಂಡ್ರೂಸ್ ಅವರಿಂದ ತನಿಖೆಯನ್ನು ನಡೆಸಲು ಅಗತ್ಯ ಮಾಹಿತಿ ಲಭ್ಯವಾಗಬಹುದಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಹನೀಫ್ ಅವರನ್ನು ತನಿಖೆಗೆ ಸಹಕರಿಸುವಂತೆ ಕೇಳಿಕೊಳ್ಳಲಾಗುವುದು.ಅವರನ್ನು ಭೇಟಿ ಮಾಡಲು ಭಾರತಕ್ಕೆ ಹೋಗುವುದಾಗಿ ತಿಳಿಸಿದ್ದಾರೆ ಎಂದು ಸರಕಾರಿ ವಕೀಲರಾದ ರಾಬರ್ಟ್ ಮ್ಯಾಕ್‌ಲ್ಯಾಂಡ್ ತಿಳಿಸಿದ್ದಾರೆ.
ಮೊಹಮ್ಮದ್ ಹನೀಫ್ 2007ರ ಜುಲೈ ತಿಂಗಳಲ್ಲಿ ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಸ್ಟ್ರೇಲಿಯಾ ಪೊಲೀಸ್‌ರು 12 ದಿನಗಳ ಕಾಲ ಬಂಧನದಲ್ಲಿರಿಸಿದ್ದರು.
|