ಇರಾಕ್ ದೇಶದ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಜಾಗತಿಕ ಉಗ್ರಗಾಮಿ ಸಂಘಟನೆಯಾದ ಅಲ್‌ಕೈದಾ ನಡುವೆ ನೇರ ಸಂಬಂಧವಿಲ್ಲವೆಂದು ಪೆಂಟೆಗಾನ್ ವರದಿ ಸಲ್ಲಿಸಿದೆ.
ಪೆಂಟೆಗಾನ ಅಧ್ಯಯನದ ವರದಿಯನ್ನು ಅಂತರ್ಜಾಲದ ಬದಲಿಗೆ ನಿಯಮಿತವಾಗಿ ಮಾಧ್ಯಮಗಳಿಗೆ ವಿತರಿಸುವಂತೆ ಅಮೆರಿಕ ಸರಕಾರ ಪೆಂಟೆಗಾನ್‌ಗೆ ಆದೇಶ ನೀಡಿದೆ.
ಇರಾಕ್ ಯುದ್ದ ಆರಂಭವಾಗಿ ಐದು ವರ್ಷಗಳ ನಂತರ ಪೆಂಟೆಗಾನ್ 6 ಲಕ್ಷ ದಾಖಲೆಗಳು, ಸದ್ದಾಂ ಹುಸೇನ್‌ನ ಸಹಚರರ ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸಿದ್ದು ಆಲ್‌ಕೈದಾ ಸಂಘಟನೆ ಹಾಗೂ ಸದ್ದಾಂ ಹುಸೇನ್ ಮಧ್ಯ ಯಾವುದೇ ನೇರ ಸಂಬಂಧವಿಲ್ಲವೆಂದು ಪ್ರಕಟಿಸಿದೆ.
ಬ್ಲೂ ರಿಬ್ಬನ್ ಆಯೋಗ ಕೂಡಾ ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಆಲ್‌ಕೈದಾ ಮಧ್ಯೆ ನೇರ ಸಂಬಂಧವಿಲ್ಲವೆಂದು ವರದಿಯನ್ನು ಸಲ್ಲಿಸಿತ್ತು.
|