ಪ್ಯಾಲಿಸ್ತೇನಿ ನಾಗರಿಕರ ಮೇಲೆ ದಾಳಿ ನಡೆಸಿದ ಇಸ್ರೆಲ್ ದೇಶವನ್ನು ವಿಶ್ವ ಸಂಸ್ಥೆ ಪ್ರದಾನ ಕಾರ್ಯದರ್ಶಿ ಬಾನ್ ಕಿ. ಮೂನ್ ತೀವ್ರವಾಗಿ ಖಂಡಿಸಿದ್ದಾರೆ.
ಇಸ್ರೆಲ್ ದೇಶ ಸೇನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ ಬಾನ್ ಕಿ ಮೂನ್ ಕೂಡಲೇ ಶಾಂತಿ ಮಾತುಕತೆಯನ್ನು ಆರಂಭಿಸುವಂತೆ ಇಸ್ರೆಲ್‌ಗೆ ಮನವಿ ಮಾಡಿದ್ದಾರೆ.
ಇಸ್ರೆಲ್ ನಡೆಸಿದ ದಾಳಿಯಲ್ಲಿ ಪ್ಯಾಲಿಸ್ತೇನಿ ಮಹಿಳೆಯರು ಮಕ್ಕಳು ಸಾವನ್ನಪ್ಪಿರುವುದು ನೋವನ್ನು ತಂದಿದೆ ಎಂದು ಆಯೋಜಿಸಿದ ಇಸ್ಲಾಮ್ ಶೃಂಗ ಸಭೆಯಲ್ಲಿ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಭಾನ್ ಕಿ. ಮೂನ್ ತಿಳಿಸಿದರು.
ಗಾಜಾ ಪ್ರದೇಶದಿಂದ ಉತ್ತರ ಇಸ್ರೆಲ್ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆಸಿ ಹಲವರನ್ನು ಹತ್ಯೆಗೈದ ಪ್ರತೀಕಾರವಾಗಿ ಇಸ್ರೆಲ್ ದೇಶದ ವಿಮಾನಗಳು ಉತ್ತರ ಗಾಜಾ ಪ್ರದೇಶದ ಮೇಲೆ ನಡೆಸಿ ಪ್ಯಾಲಿಸ್ತೇನಿ ಉಗ್ರರ ಹತ್ಯೆಗೈದಿದ್ದರು.
|