ಮೆಡಿಟೆರೆನಿಯನ್ ದೇಶಗಳ ಒಕ್ಕೂಟವನ್ನು ರಚಿಸಲು ಪ್ರಯತ್ನಿಸಿದ ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸುರ್ಕೋಜಿ ಅವರ ಪ್ರಯತ್ನಕ್ಕೆ ಯುರೋಪ್ ಒಕ್ಕೂಟ ತರಾಟೆಗೆ ತೆಗೆದುಕೊಂಡಿದೆ.
ಟೆಲಿವಿಜನ್ ಮತ್ತು ಪರಿಸರ ಸ್ನೆಹಿತ ಶೀತಕಗಳ ಮೇಲೆ ಹೇರಿದ ವ್ಯಾಟ್ ತೆರಿಗೆಯಲ್ಲಿ ಕಡಿತಗೊಳಿಸಬೇಕು ಎನ್ನುವ ಗೊರ್ಡಾನ್ ಬ್ರೌನ್ ಅವರ ವಿಚಾರಗಳನ್ನು ಯುರೋಪ್ ಒಕ್ಕೂಟ ತಳ್ಳಿ ಹಾಕಿತು
ಯುರೋಪ್ ದೇಶಗಳ ಶೃಂಗಸಭೆ ಬ್ರೂಸೆಲ್ಸ್‌ನಲ್ಲಿ ಆರಂಭವಾಗಿದ್ದು, ಯುರೋಪ್ ಆರ್ಥಿಕತೆ, ಇಂಧನ ಸರಬರಾಜು ಹಾಗೂ ಜಾಗತಿಕ ತಾಪಮಾನ ಕುರಿತಂತೆ ಚರ್ಚೆ ನಡೆಸಲಾಗಿದೆ.
ಮೆಡಿಟೆರೆನಿಯನ್ ದೇಶಗಳ ಒಕ್ಕೂಟ ರಚಿಸಿ ವಲಸೆ, ಪರಿಸರ, ಇಂಧನ ಅಭಿವೃದ್ಧಿ, ವ್ಯಾಪಾರ, ಮತ್ತು ಭಯೋತ್ಪಾದನೆ ಹಾಗೂ ಅಪರಾಧ ಪ್ರಕರಣಗಳ ಕುರಿತಂತೆ ಒಂದಾಗಿ ಕೆಲಸ ಮಾಡುವ ನಿರ್ಧಾರಕ್ಕೆ ಯುರೋಪ್ ಒಕ್ಕೂಟ ತಿರಸ್ಕರಿಸಿತು.
|