ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ಬೆಂಬಲ: ಟೆಬೆಟಿಯನ್ ನಿರಾಶ್ರಿತರ ಮನವಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ತಮ್ಮನ್ನು ಮುಕ್ತವಾಗಿ ಬೆಂಬಲಿಸಬೇಕು ಎಂದು ಅಮೆರಿಕದಲ್ಲಿರುವ ಟೆಬೆಟಿಯನ್ ನಿರಾಶ್ರಿತರು ಆಗ್ರಹಿಸಿದ್ದಾರೆ.

ಚೀನಾ ಪೊಲೀಸರಿಂದ 10 ಮಂದಿ ಟೆಬೆಟಿಯನ್‌ರು ಹತ್ಯೆಯಾದ ಹಿನ್ನೆಲೆಯಲ್ಲಿ .ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಮುಖ್ಯ ಕಚೇರಿಯ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಿದ ಟೆಬೆಟಿಯನ್ನರು ರಾಹುಲ್ ಗಾಂಧಿಗೆ ಪತ್ರ ಬರೆದು ಬೆಂಬಲ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಹುಲ್ ಯುವನಾಯಕರಾಗಿದ್ದು,ಮುಂದಿನ ದಿನಗಳಲ್ಲಿ ಪ್ರಬಾವಿ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಟಿಬೆಟ್ ಕುರಿತಂತೆ ಜವಾಹರ್‌ಲಾಲ್ ಮತ್ತು ಮನಮೋಹನ್‌ಸಿಂಗ್ ಅವರ ನಿಲುವುಗಳನ್ನು ಬೆಂಬಲಿಸಬಾರದೆಂದು ಮನವಿ ಮಾಡಲಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಟಿಬೆಟ್ ಯುವಕಾಂಗ್ರೆಸ್ ನಾಯಕ ಟಿಸೆರಿಂಗ್ ಅಮೆರಿಕದಲ್ಲಿದ್ದು, ತಮ್ಮ ಸಮುದಾಯ ರಾಹುಲ್ ಗಾಂಧಿಯವರಿಗೆ ಪತ್ರವನ್ನು ಸಲ್ಲಿಸಲಿದ್ದು, ಭಾರತ ಟೆಬೆಟ್ ಸಮುದಾಯದ ಏಳಿಗೆಗಾಗಿ ಮುಖ್ಯಪಾತ್ರ ವಹಿಸಬೇಕಾಗಿದೆ. ಆದರೆ ಕೆಲ ಕಾರಣಗಳಿಂದ ಭಾರತ ಟೆಬೆಟಿಯನ್ನರನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಡಕಾರ್ ಒಪ್ಪಂದಕ್ಕೆ ಚಾಡ್-ಸೂಡಾನ್ ಬದ್ದ
ಶೃಂಗಸಭೆ: ಸುರ್ಕೋಜಿ,ಬ್ರೌನ್‌ಗೆ ಗರ್ವಭಂಗ
ಇಸ್ರೆಲ್ ದಾಳಿಗೆ ಮೂನ್ ಖಂಡನೆ
ಸದ್ದಾಂ, ಅಲ್‌ಕೈದಾ ಸಂಬಂಧವಿಲ್ಲ -ಪೆಂಟೆಗಾನ್
ಅಣ್ವಸ್ತ್ರ: ಅಮೆರಿಕ, ಉತ್ತರ ಕೊರಿಯಾ ಮಾತುಕತೆ
ಹನೀಫ್ ಪ್ರಕರಣ ತನಿಖೆಗೆ ನ್ಯಾಯಾಧೀಶರ ನೇಮಕ