ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಚೀನಾದ ರಾಷ್ಟ್ರಾಧ್ಯಕ್ಷರಾಗಿ ಹು ಜೀಂಟಾವೊ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ಕಮ್ಯೂನಿಸ್ಟ್ ಪಕ್ಷದ ಉನ್ನತ ನಾಯಕ ಹಾಗೂ ಕ್ರಾಂತಿಕಾರಿ ಧುರೀಣರ ಮಗನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಜಿನ್‌ಪಿಂಗ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ತಮ್ಮ ಉತ್ತಮ ನಾಯಕತ್ವದಿಂದ ಕೇವಲ ಆರು ತಿಂಗಳಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯಲು ಶಕ್ತರಾದ ಜಿನ್‌ಪಿಂಗ್ ದೇಶದ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಿದ್ದರಾಗಿದ್ದಾರೆ.
ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಸಂಪುಟವನ್ನು ಪುನರ್‌ರಚಿಸಲು ಸಮ್ಮತಿಯನ್ನು ಸೂಚಿಸಿದ್ದು ಐವರು ಸೂಪರ್ ಮಿನಿಸ್ಟರ್‌ಗಳು ಹಾಗೂ ಸಚಿವ ಮಟ್ಟದ ಇಂಧನ ಆಯೋಗ ರಚನೆಗೆ ಅನುಮತಿ ನೀಡಿದೆ.
|