ಇಸ್ಲಾಮಿಕ್ ಭಯೋತ್ಪಾದನೆ ಸಂಘಟನೆಗೆ ಸೇರಿದ ಒರ್ವ ಪಾಕಿಸ್ತಾನಿ ಪ್ರಜೆಯನ್ನು ಡಚ್ ಪೊಲೀಸರು ಬಂಧಿಸಿದ್ದಾರೆ.
ಡಚ್ ದೇಶದ ಆಗ್ನೆಯ ಭಾಗದಲ್ಲಿರುವ ಬ್ರೆಡಾ ಪಟ್ಟಣದ ಸರಕಾರಿ ವಕೀಲರ ಕಚೇರಿಯಲ್ಲಿ ಬಂಧಿಸಲಾಗಿದೆ ಎಂದು ಡಚ್ ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಯುರೋಪ್ ಮೇಲೆ ದಾಳಿ ನಡೆಸಲು ಸಿದ್ದತೆ ನಡೆಸುತ್ತಿರುವ ಜಾಗತಿಕ ಜಿಹಾದಿ ಸಂಘಟನೆಗೆ ಸಂಪರ್ಕವಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪಾಕಿಸ್ತಾನದ ಬುಡಕಟ್ಟು ಪ್ರದೇಶದ ದಕ್ಷಿಣ ವಜೀರಿಸ್ಥಾನನಲ್ಲಿರುವ ಬೈತುಲ್ಲಾಹ ಮೆಹಸೂದ್ ಅವರ ನೇತೃತ್ವದಲ್ಲಿ ಆಲ್‌ಕೈದಾ ದಾಳಿಯನ್ನು ಯೋಜಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|