ಚೀನಾ ವಿರೋಧಿ ಪ್ರತಿಭಟನೆಗಳನ್ನು ಟಿಬೆಟಿಯನ್ನರು ಹಮ್ಮಿಕೊಳ್ಳುತ್ತಿದ್ದು,ಪ್ರತಿಭಟನೆಗಳನ್ನು ನಿಲ್ಲಿಸದಿದ್ದಲ್ಲಿ ಕಠಿಣಕ್ರಮ ಅನಿವಾರ್ಯವಾಗುತ್ತದೆ. ಕಳೆದ ಮೂರು ತಿಂಗಳಲ್ಲಿ 10 ಮಂದಿ ಟಿಬೆಟಿಯನ್ನರ ಹತ್ಯೆಮಾಡಲಾಗಿದೆ. ಎಂದು ಚೀನಾ ತಿಳಿಸಿದೆ.
ಟೆಬೆಟಿಯನ್ ಪ್ರಾಂತ್ಯದಲ್ಲಿ ಚೀನಾದ ವಿವಾದಾತ್ಮಕ ನಿಯಮಗಳಿಂದಾಗಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಟಿಬೆಟಿಯನ್ ರಾಜಧಾನಿ ಲಹಸಾದಲ್ಲಿ ಚೀನಾ ಸೇನೆ ಗಸ್ತು ನಡೆಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
1951ರಿಂದ ಚೀನಾ ದೇಶದ ಸ್ವಾಧೀನಕ್ಕೆ ಒಳಪಟ್ಟ ಟೆಬೆಟ್‌ನಲ್ಲಿ ಪ್ರತಿಭಟನಾಕಾರರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿದ್ದು ಅದನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಿಂದ ಟೆಬೆಟ್‌ನ್ನು ಪ್ರತ್ಯೇಕಿಸಲು ಧಾರ್ಮಿಕ ಗುರು ದಲೈಲಾಮಾ ದೇಶದ ಒಳಗೆ ಹಾಗೂ ಹೊರದೇಶಗಳಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಆರೋಪವನ್ನು ತಳ್ಳಿಹಾಕಿದ ಟೆಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಸೇನೆಯನ್ನು ಬಳಸುವುದನ್ನು ನಿಲ್ಲಿಸಿ. ಭಾರತ ತಮ್ಮನ್ನು ಹಾಗೂ ಟಿಬೆಟ್ ಸರಕಾರವನ್ನು ಬೆಂಬಲಿಸುತ್ತಿದೆ ಎನ್ನುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.
|