ಚೀನಾ ನೀತಿಯನ್ನು ವಿರೋಧಿಸಿ ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು,ನಗರಾದ್ಯಂತ ಅಶ್ರುವಾಯು ಹಾಗು ಗುಂಡಿನ ಶಬ್ದ ಕೇಳಿಬರುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.
ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರು ಭದ್ರತಾಪಡೆಗಳು ಹಾಗೂ ಸೇನಾವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಟಿಬೆಟ್‌ನಲ್ಲಿರುವ ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಅಂಗಡಿಗಳು ಹಾಗೂ ವಾಹನಗಳನ್ನು ಟಿಬೆಟಿಯನ್ ಪ್ರತಿಭಟನಾಕಾರರು ಧ್ವಂಸ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಧಾನಿಯ ಪ್ರಮುಖ ಮಾರುಕಟ್ಟೆಗೆ ಬೆಂಕಿಯನ್ನು ಹಚ್ಚಲಾಗಿದ್ದು, ಅನೇಕ ಟೆಬೆಟಿಯನ್ನರು ಗಾಯಾಳುಗಳಾಗಿದ್ದಾರೆ ಎಂದು ಟೆಬೆಟಿಯನ್ನರ ಅಂತಾರಾಷ್ಟ್ರೀಯ ಮಹಿಳಾ ಪ್ರಚಾರಕರಾದ ಕಾಟೆ ಸೌಂಡರ್ ಹೇಳಿದ್ದಾರೆ.
|