ಎವರೆಸ್ಟ್‌ನ ತುತ್ತ ತುದಿಯಲ್ಲಿ ಟಿಬೇಟಿಯನ್ನರು ಪ್ರತಿಭಟನೆ ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ, ಚೀನದ ವಿನಂತಿಯಂತೆ, ನೇಪಾಳವು ಮೌಂಟ್ ಎವರೆಸ್ಟ್ ಪ್ರವೇಶಕ್ಕೆ ತಾತ್ಕಾಲಿಕ ತಡೆಯೊಡ್ಡಿದೆ.
ಒಲಂಪಿಕ್ ಜ್ಯೋತಿಯನ್ನು ಎವರೆಸ್ಟ್ ಬೆಟ್ಟದತ್ತ ಕೊಂಡೊಯ್ಯುವ ಯೋಜನೆಗೆ ಟಿಬೆಟಿಯನ್ನರ ಪ್ರತಿಭಟನೆಯಿಂದ ಅಡ್ಡಿಯಾದೀತು ಎಂಬ ಕಳವಳದಿಂದ ಬೀಜಿಂಗ್ ಈ ಕ್ರಮಕ್ಕೆ ಮುಂದಾಗಿದೆ.
ಬೀಜಿಂಗ್ ಒಲಂಪಿಕ್ ಜ್ಯೋತಿ ಮೌಂಟ್ ಎವರೆಸ್ಟಿನತ್ತ ಸಾಗುವ ದಿನವನ್ನು ನಿರ್ಧರಿಸಿಲ್ಲವಾದರೂ, ಎಪ್ರಿಲ್ ಕೊನೆ ಅಥವಾ ಮೇ ತಿಂಗಳ ಆದಿಯಲ್ಲಿ ನಡೆಯಲಿದೆ ಎಂದು ವರದಿಗಳು ಹೇಳಿವೆ.
ಎವರೆಸ್ಟಿನ ಮೂಲಶಿಬಿರಕ್ಕಿಂತ ಆಚೆಗೆ ತೆರಳಲು ಮೇ 10ರ ತನಕ ಪರ್ವಾತಾರೋಹಿಗಳನ್ನು ತಡೆಯಲಾಗುವುದು.
ಈ ಮೂಲಕ ಕೆಲವರು ನುಸುಳಿ ಜ್ಯೋತಿಯನ್ನು ಎವರೆಸ್ಟಿನ ಮೇಲೆ ಕೊಂಡೊಯ್ಯುವ ವೇಳೆ ತೊಂದರೆ ಉಂಟುಮಾಡಿಯಾರು ಎಂಬ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ನೇಪಾಳ ಪ್ರವಾಸೊದ್ಯಮ ಸಚಿವರು ಹೇಳಿದ್ದಾರೆ.
|