ಬ್ರಿಟನ್ನಿನ ವಿಫಲ ಭಯೋತ್ಪಾದನಾ ಸಂಚಿನಲ್ಲಿ ಭಾಗಿಯಾಗಿರುವುದಾಗಿ ಸುಳ್ಳು ಆರೋಪ ಹೊರಿಸಿರುವ ಅಸ್ಟ್ರೇಲಿಯಾ ಸರಕಾರದಿಂದ ಪರಿಹಾರ ಪಡೆಯಲು, ಭಾರತೀಯ ವೈದ್ಯ ಮೊಹಮ್ಮದ್ ಹನೀಫ್, ಪರಿಹಾರ ವಿಚಾರದಲ್ಲಿ ಪರಿಣಿತ ಕಾನೂನು ಸಂಸ್ಥೆಯೊಂದನ್ನು ಗೊತ್ತುಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹನೀಫ್ ಪ್ರಕರಣದ ನಿಭಾವಣೆ ಕುರಿತು ನ್ಯಾಯಾಂಗ ತನಿಖೆಯನ್ನು ಆಸ್ಟ್ರೇಲಿಯಾ ಸರಕಾರ ಘೋಷಿಸಿರುವ ಬೆನ್ನಿಗೆ ಈ ವಿಚಾರ ಹೊರಬಿದ್ದಿದೆ.
ಕಳೆದ ವರ್ಷ ಆಸ್ಟ್ರೇಲಿಯಾ ಅಧಿಕಾರಿಗಳು ನಡೆಸಿಕೊಂಡಿರುವ ರೀತಿಯುಂದ ಆಗಿರುವ ಅವಮಾನದ ನಷ್ಟಭರ್ತಿಗಾಗಿ ಅವರು ಈ ಸಂಸ್ಥೆಯನ್ನು ಗೊತ್ತುಮಾಡಿದ್ದಾರೆ ಎಂದು ಹನೀಫ್ ಅವರ ವಕೀಲ ಪೀಟರ್ ರಸ್ಸೊ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ಉಲ್ಲೇಖಿಸಿದೆ.
|