ಇಸ್ಲಾಮಾಬಾದ್‌ನ ಇಟಾಲಿಯನ್ ರೆಸ್ಟೋರೆಂಟ್ ಒಂದರಲ್ಲಿ ಶನಿವಾರ ರಾತ್ರಿ ಉಂಟಾದ ಬಾಂಬ್ ಸ್ಫೋಟದಲ್ಲಿ ಒಬ್ಬ ಟರ್ಕಿಶ್ ನೌಕರ ಸಾವನ್ನಪ್ಪಿದ್ದು, ಅಮೆರಿಕ ರಾಯಭಾರಿಗಳು ಸೇರಿದಂತೆ ಅನೇಕ ವಿದೇಶಿಯರು ಗಾಯಗೊಂಡಿದ್ದಾರೆ.
ಹೆಚ್ಚಾಗಿ ವಿದೇಶೀಯರೇ ಭೇಟಿ ನೀಡುವ ಲೂನಾ ಕ್ಯಾಪ್ರೀಸ್ ರೆಸ್ಟೋರೆಂಟ್‌ನ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಸತ್ತಿಂದ ನಾಲ್ಕು ಕಿ.ಮೀ ದೂರದಲ್ಲಿ ಈ ಸ್ಫೋಟವು ಸಂಭವಿಸಿದ್ದು, ರೆಸ್ಟೋರೆಂಟ್‌ನ ಗೋಡೆಯ ಹೊರಭಾಗದಲ್ಲಿ ಬಾಂಬ್ ಇಡಲಾಗಿತ್ತು ಎಂದು ತಿಳಿದುಬಂದಿದೆ.
ಇದು ಆತ್ಮಹತ್ಯಾ ದಾಳಿಯ ಅಲ್ಲ, ಬಾಂಬ್ ಸ್ಫೋಟ ಎಂಬುದನ್ನು ಆಂತರಿಕ ಸಚಿವರು ಖಚಿತಪಡಿಸಿದ್ದಾರೆ.
|