ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಬೆಟ್ ನೀತಿ ಬದಲಾವಣೆಗೆ ಅಮೆರಿಕ ಕರೆ
ಚೀನಾದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಅಮೆರಿಕವು ಆತಂಕ ವ್ಯಕ್ತಪಡಿಸಿದ್ದು, ದಲೈ ಲಾಮಾ ಅವರೊಂದಿಗೆ ಮಾತುಕತೆಯನ್ನು ನಡೆಸುವ ಮೂಲಕ ತನ್ನ ಟಿಬೆಟ್ ನೀತಿಯನ್ನು ಬದಲಾಯಿಸುವಂತೆ ಬೀಜಿಂಗ್‌ಗೆ ಕರೆ ನೀಡಿದೆ.

ಟಿಬೆಟ್‌ನಲ್ಲಿರುವ ಪ್ರತಿಭಟನಾಕಾರರೊಂದಿಗೆ ಐಕ್ಯತೆಯನ್ನು ಹೊಂದುವುದರೊಂದಿಗೆ, ಸ್ಥಳೀಯ ಟೆಬೆಟಿಯನ್ ಅಮೆರಿಕನ್ ಸಮೂಹವು ನ್ಯೂಯಾರ್ಕ್, ವಾಷಿಂಗ್ಟನ್ ಮತ್ತು ಚಿಕಾಗೋದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಈ ಹೇಳಿಕೆಯನ್ನು ನೀಡಿದ್ದಾರೆ.

ಟಿಬೆಟ್‌ನ ಸಂಸ್ಕೃತಿ, ಪಂಗಡ ಮತ್ತು ನಿತ್ಯ ಜೀವನದ ಮೇಲೆ ಪ್ರಭಾವ ಬೀರುವುದರಿಂದ ಈ ನೀತಿಯು ಚೀನಾದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಿದ್ದು, ಚೀನಾವು ನೀತಿಯನ್ನು ಪುನರ್ ವಿಮರ್ಷೆ ನಡೆಸಬೇಕೆಂದು ರೈಸ್ ಒತ್ತಾಯಿಸಿದ್ದಾರೆ.

ಜಾರ್ಜ್ ಬುಷ್ ಅವರು ದಲೈ ಲಾಮಾ ಅವರೊಂದಿಗೆ ಚೀನಾ ಸರಕಾರವು ನೇರವಾಗಿ ಅಥವಾ ಪ್ರತಿನಿಧಿಗಳ ಮೂಲಕ ಮಾತುಕತೆಯನ್ನು ನಡೆಸಲು ಪ್ರೇರೇಪಿಸುತ್ತಿದ್ದರು ಇದರಿಂದ ದೀರ್ಘಾವಧಿಯ ಈ ವಿವಾದವು ಬಗೆಹರಿಯುವ ಸಾಧ್ಯತೆಯಿದೆ ಎಂದು ರೈಸ್ ಅಭಿಪ್ರಾಯಪಟ್ಟರು.
ಮತ್ತಷ್ಟು
ಪಾಕ್‌ನಲ್ಲಿ ಬಾಂಬ್ ಸ್ಫೋಟ: 1 ಸಾವು
ಟಿಬೆಟ್‌ನಲ್ಲಿ ವ್ಯಾಪಕ ಹಿಂಸಾಚಾರ
ಪರಿಹಾರ ತಜ್ಞ ಕಾನೂನು ಸಂಸ್ಥೆಗೆ ಹನೀಫ್ ಮೊರೆ
ಎವರೆಸ್ಟ್ ಪ್ರವೇಶಕ್ಕೆ ತಡೆಯೊಡ್ಡಿದ ನೇಪಾಳ
ಟಿಬೆಟ್ ಉದ್ರಿಕ್ತ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಚೀನಾ: ಪೊಲೀಸ್ ಗುಂಡಿಗೆ 10 ಟಿಬೆಟಿಯನ್ನರ ಬಲಿ