ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆನ್ಸಿಕ್ ಸಂಶೋಧನೆಗೆ ಗುರ್ಮುಖಿ ಬಳಕೆ
ಅಪೂರ್ವ ಅಧ್ಯಯನ ಒಂದರಲ್ಲಿ ಪಂಜಾಬಿ ಲಿಪಿ ಗುರ್ಮುಖಿಯನ್ನು ಬ್ರಿಟಿಷ್ ಫಾರೆನ್ಸಿಕ್ ತಜ್ಞರು ಬಳಸಿಕೊಂಡಿದ್ದಾರೆ. ಇದರ ಮೂಲಕ, ಅಪರಾಧಿ ಪ್ರಕರಣಗಳಲ್ಲಿ ದಾಖಲೆಗಳನ್ನು ಬರೆದ ವ್ಯಕ್ತಿತ್ವವನ್ನು ಸಾಬೀತು ಪಡಿಸಲು ಬರಹಗಾರರ ಮೂಲ ಹಾಗೂ ವಯಸ್ಸನನ್ನು ಪತ್ತೆಹಚ್ಚಬಹುದು ಎಂಬುದು ಅವರ ಅಂಬೋಣವಾಗಿದೆ.

ಡರ್ಬೆ ವಿಶ್ವವಿದ್ಯಾನಿಲಯದ ಸಂಶೋಧಕರು ಪಂಜಾಬಿ ಪಂಗ್ರಾಮ್(ಅಕ್ಷರ ಮಾಲೆಯ ಎಲ್ಲ ಅಕ್ಷರಗಳನ್ನು ಒಳಗೊಂಡ ವಾಕ್ಯ)ವನ್ನು ಬರಹಗಾರರ ಗುರುತು ಪತ್ತೆಗಾಗಿ ಬಳಸಿದ್ದಾರೆ. ಇಂಗ್ಲೀಷ್‌ನಲ್ಲಿರುವ ಜನಪ್ರಿಯ ಪಂಗ್ರಾಮವೆಂದರೆ, "The quick brown fox jumps over the lazy dog" ಇದರಲ್ಲಿ ಇಂಗ್ಲೀಷಿನ ಎಲ್ಲಾ 26 ಅಕ್ಷರಗಳ ಬಳಕೆಯಾಗಿದೆ.

ಗುರ್ಮುಖಿಯಲ್ಲಿರುವ ಇಂಡೋ-ಆರ್ಯನ್ ಭಾಷೆಯ ಎಲ್ಲ 40 ಅಕ್ಷರಗಳಿರುವ ಪಂಜಾಬಿ ಲಿಪಿಯ ಪಂಜಾಬಿ ಪಂಗ್ರಾಮದ ಒಂದು ಪ್ಯಾರವನ್ನು ಬರಹಗಾರನ ವ್ಯಕ್ತಿತ್ವವನ್ನು ತಯಾರಿಸಲು ಬಳಸಲಾಗಿದೆ. ಈ ಅಧ್ಯಯನಕ್ಕೆ ಸುಮಾರು 200 ಮಂದಿಯನ್ನು ಬಳಸಲಾಗಿದ್ದು, ವ್ಯಕ್ತಿಯೊಬ್ಬ ವಿದೇಶದವನೇ ಎಂಬುದನ್ನು ಪತ್ತೆಹಚ್ಚಲು ಈ ಪ್ಯಾರವನ್ನು ಬಳಸಲಾಗಿದೆ.

ವ್ಯಕ್ತಿಯೊಬ್ಬ ಭಾರತ ಅಥವಾ ಪಾಕಿಸ್ತಾನದಲ್ಲಿ ಜನಿಸಿ ಬ್ರಿಟನ್ನಿಗೆ ತೆರಳಿದ್ದಾನೆಯೇ ಇಲ್ಲವೇ ಬ್ರಿಟನ್ನಿನಲ್ಲಿಯೇ ಜನಿಸಿದವನೇ ಎಂದು ಪತ್ತೆಹಚ್ಚಲು ಈ ಅಧ್ಯಯನ ಸಹಕಾರಿಯಾಗಲಿದೆ. ಅಧ್ಯಯನದ ಫಲಿತಾಂಶಗಳು ಫಾರೆನ್ಸಿಕ್ ವಿಜ್ಞಾನದ ಮೇಲೆ ಪ್ರಮುಖ ಪರಿಣಾಮ ಬೀರಲಿದೆ. ಉದಾಹರಣೆಗೆ ಯಾವುದಾದರೊಂದು ಬೆದರಿಕೆ ಪತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬರಹಗಾರರನ್ನು ಪತ್ತೆ ಹಚ್ಚಲು ಇದು ಸಹಕರಿಸುತ್ತದೆ.

ಡರ್ಬೆಯ ಫಾರೆನ್ಸಿಕ್ ವಿಜ್ಞಾನದ ಉಪನ್ಯಾಸಕ ಇಯಾನ್ ಟರ್ನರ್, ಫಾರೆನ್ಸಿಕ್ ವಿಜ್ಞಾನ ಕಾರ್ಯಕ್ರಮದ ನಾಯಕ ಜೂಲಿಯನ್ ಲವ್ ಮತ್ತು ಅಪರಾಧ ಶಾಸ್ತ್ರದ ವಿಧ್ಯಾರ್ಥಿ ರಾಜ್‌ವಿಂದರ್ ಕೌರ್ ಜತೆಸೇರಿ ಈ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕೌರ್ ಪಂಜಾಬಿ ಲಿಪಿಯನ್ನು ಆಯ್ಕೆ ಮಾಡಿದ್ದಾರೆ.
ಮತ್ತಷ್ಟು
ಬ್ರಿಟನ್: ಭಾರತೀಯ ರೆಸ್ಟೋರೆಂಟ್ ಮಾಲಿಕರ ಪ್ರತಿಭಟನೆ
ಟೆಬೆಟ್ ನೀತಿ ಬದಲಾವಣೆಗೆ ಅಮೆರಿಕ ಕರೆ
ಪಾಕ್‌ನಲ್ಲಿ ಬಾಂಬ್ ಸ್ಫೋಟ: 1 ಸಾವು
ಟಿಬೆಟ್‌ನಲ್ಲಿ ವ್ಯಾಪಕ ಹಿಂಸಾಚಾರ
ಪರಿಹಾರ ತಜ್ಞ ಕಾನೂನು ಸಂಸ್ಥೆಗೆ ಹನೀಫ್ ಮೊರೆ
ಎವರೆಸ್ಟ್ ಪ್ರವೇಶಕ್ಕೆ ತಡೆಯೊಡ್ಡಿದ ನೇಪಾಳ