ಪಾಕಿಸ್ತಾನ ಸುಪ್ರೀಂ ಕೋರ್ಟಿನಿಂದ ಮರಣದಂಡನೆಗೀಡಾಗಿರುವ ಸರಬ್‌ಜಿತ್ ಸಿಂಗ್‌ಗೆ ದೂತಾವಾಸದ ಸಂಪರ್ಕ ಕೋರಿರುವ ಭಾರತ, ಈ ಮೂಲಕ, ಲಾಹೋರ್ ಮತ್ತು ಮುಲ್ತಾನ್‌ಗಳಲ್ಲಿನ 1990ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ತನ್ನ ಪ್ರಜೆಗೆ ಮರಣ ದಂಡನೆ ವಿಧಿಸುವುದು, ಇದನ್ನು ವ್ಯವಹರಿಸುವ ಉತ್ತಮ ಕ್ರಮವಾಗಲಾರದು ಎಂಬ ಸಂದೇಶ ರವಾನಿಸಿದೆ.
ಎಪ್ರಿಲ್ ಒಂದರಂದು ಗಲ್ಲಿಗೇರಿಸಲು ಆದೇಶಿಸಲಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳಿರುವ ಸರಬ್‌ಜಿತ್ ಸಿಂಗ್‌ಗೆ ದೂತಾವಾಸದ ಸಂಪರ್ಕ ಕಲ್ಪಿಸುವಂತೆ ವಿನಂತಿಸಲಾಗಿದೆ ಎಂದು ಭಾರತೀಯ ಹೈಕಮಿಷನ್ ಮೂಲಗಳು ಹೇಳಿವೆ.
ಪ್ರಸ್ತುತ ಸಂದರ್ಭದಲ್ಲಿ ಸರಬ್‌ಜಿತ್‌ನನ್ನು ಗಲ್ಲಿಗೇರಿಸುವುದು, ಸನ್ನಿವೇಶದ ಉತ್ತಮ ವ್ಯವಹರಣೆಯಾಗಲಾರದು ಎಂಬ ಸೂಚನೆಯನ್ನು ಭಾರತ ನೀಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
|