ಚೀನಿಯರು ಸೇರಿದಂತೆ ಅನೇಕ ದೇಶಗಳ ಪ್ರವಾಸಿಗರು ಟಿಬೆಟ್ ರಾಜಧಾನಿ ಲ್ಹಾಸಾಗೆ ಭೇಟಿ ನೀಡುತ್ತಿದ್ದು ಭಯೋತ್ಪಾದಕರು ದೇಶವನ್ನು ಆಳುತ್ತಿದ್ದಾರೆ ಎನ್ನುವ ಆತಂಕವನ್ನು ಹೊಂದಿದ್ದಾರೆ ಎಂದು ಟೆಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ.
ಟಿಬೆಟ್‌ನಲ್ಲಿ ಸ್ವಾತಂತ್ರ ನೀಡಲು ಚೀನಾ ದೇಶ ನಿರಾಕರಿಸುತ್ತಿದೆ.ಟಿಬೆಟ್ ನಾಗರಿಕರಿಗೆ ವಿದೇಶಿ ನೀತಿಯನ್ನು ಅನುಸರಿಸಬೇಕು ಅಥವಾ ರಕ್ಷಣೆಗಾಗಿ ಹೋರಾಡಲು ಸಿದ್ದರಾಗಬೇಕು ಕೇವಲ ಎರಡು ದಾರಿಗಳಿವೆ ಎಂದು ಲಾಮಾ ಹೇಳಿದ್ದಾರೆ.
ಸ್ವಾತಂತ್ರ ಕೇವಲ ಪೇಪರ್‌ಗಳಲ್ಲಿ ಮಾತ್ರ ತೋರಿಸಲಾಗಿದೆ ವಾಸ್ತವವಾಗಿ ಅದು ತೀರಾ ದೂರವಾಗಿದೆ. ದೇಶದಲ್ಲಿರುವ ಮುಖ್ಯ ಅಧಿಕಾರಗಳನ್ನು ಚೀನಿಯರು ಕಬಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಭಾರತಕ್ಕೆ ಚೀನಾ ಅಧ್ಯಕ್ಷ ಹು ಜಿಂಟಾವೊ ಭೇಟಿ ನೀಡಿದಾಗ ಭಾರತ ಪ್ರತಿಭಟನಾಕಾರರ ವಿರುದ್ದ ತೆಗೆದುಕೊಂಡ ನಿಲುವುಗಳು ಟಿಬೆಟ್ ಸಮುದಾಯದಲ್ಲಿ ಅಸಮಧಾನ ಮೂಡಿಸಿದೆ. ಭಾರತ ಟಿಬೆಟ್‌ವಿರುದ್ದ ತೆಗೆದುಕೊಂಡ ನೀತಿಗಳನ್ನು ಪುನರ್‌ಪರಿಶೀಲಿಸುವುದು ಒಳಿತು ಎಂದು ದಲೈಲಾಮಾ ಭಾರತಕ್ಕೆ ಮನವಿ ನೀಡಿದ್ದಾರೆ
|