ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಸಂಸತ್ತಿನ ಚೊಚ್ಚಲ ಅಧಿವೇಶನ
ಪಾಕಿಸ್ತಾನದ ನೂತನ ಸಂಸತ್ತಿನ ಚೊಚ್ಚಲ ಅಧಿವೇಶನ ಸೋಮವಾರ ನಡೆದಿದ್ದು, ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಿಗಿ ಬಂದೋಬಸ್ತಿನೊಂದಿಗೆ ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಪಿಪಿ ಸಹಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರು, 'ಇದು ನಿರಂಕುಶ ಪ್ರಭುತ್ವದ ಕೊನೆಯ ದಿನ' ಎಂದು ಬಣ್ಣಿಸಿದರು.

ನಿರ್ಗಮನ ಸ್ಪೀಕರ್ ಚೌಧರಿ ಅಮೀರ್ ಹುಸೇನ್ ಅವರು 342 ಸ್ಥಾನಗಳ ಸಾಮರ್ಥ್ಯದ ರಾಷ್ಟ್ರೀಯ ಅಸ್ಸೆಂಬ್ಲಿಯಲ್ಲಿ ಒಟ್ಟು 328 ಸಂಸದರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಉಗ್ರರ ಹತ್ಯೆಗೀಡಾದ ಬೆನಜೀರ್ ಭುಟ್ಟೋ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.

ಚುನಾವಣೆಯಲ್ಲಿ ಸ್ಫರ್ಧಿಸದ ಪಿಪಿಪಿಯ ಜರ್ದಾರಿ ಹಾಗೂ ಪಿಎಂಎಲ್(ಎನ್)ನ ನವಾಜ್ ಶರೀಫ್ ಅವರಿಗಳು ಅತಿಥಿ ಗ್ಯಾಲರಿಯಲ್ಲಿ ಕುಳಿತು ಸಂಸತ್ ಪ್ರಕ್ರಿಯೆಯನ್ನು ವೀಕ್ಷಿಸಿದರು. ಈ ಇಬ್ಬರು ನಾಯಕರು ಸಂಯುಕ್ತ ಸರಕಾರ ರಚನೆಯ ಒಪ್ಪಂದಕ್ಕೆ ಮಾರ್ಚ್ 9ರಂದು ಸಹಿ ಮಾಡಿದ್ದಾರೆ.

ಅಧಿವೇಶನದಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲದ ಕಾರಣ ಅಧ್ಯಕ್ಷ ಪರ್ವೇಜ್ ಮುಶರಫ್ ಹಾಜರಿರಲಿಲ್ಲ. ಪಿಪಿಪಿ ಸದಸ್ಯರು ಕಪ್ಪುಪಟ್ಟಿಯನ್ನು ಧರಿಸಿ, ಬೆನಜೀರ್ ಪೋಟೋ ಇರುವ ಚಿತ್ರದ ಬ್ಯಾಜ್ ಧರಿಸಿದ್ದರು.
ಮತ್ತಷ್ಟು
ಟಿಬೆಟ್ ಭಯೋತ್ಪಾದಕರಿಂದ ಆಳಲ್ಪಡುತ್ತಿದೆ-ಲಾಮಾ
ಸರಬ್‌ಜಿತ್‌ನನ್ನು ನೇಣಿಗೇರಿಸದಿರಿ: ಪಾಕ್‌ಗೆ ಭಾರತ ಮನವಿ
ಫಾರೆನ್ಸಿಕ್ ಸಂಶೋಧನೆಗೆ ಗುರ್ಮುಖಿ ಬಳಕೆ
ಬ್ರಿಟನ್: ಭಾರತೀಯ ರೆಸ್ಟೋರೆಂಟ್ ಮಾಲಿಕರ ಪ್ರತಿಭಟನೆ
ಟೆಬೆಟ್ ನೀತಿ ಬದಲಾವಣೆಗೆ ಅಮೆರಿಕ ಕರೆ
ಪಾಕ್‌ನಲ್ಲಿ ಬಾಂಬ್ ಸ್ಫೋಟ: 1 ಸಾವು