ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಡುಗಿಯರಿಗೇಕೆ ಕರಿಯ ತ್ವಚೆಯ ಗಂಡಸರು ಇಷ್ಟ?
ನೀವೆಂದಾದರೂ ಹುಡುಗರು ಏಕೆ ಬಳಿ ಬಣ್ಣದ ಹುಡುಗಿಯನ್ನು ಇಷ್ಟ ಪಡುತ್ತಾರೆ, ಅದೇ ರೀತಿ ಹುಡುಗಿಯರು ಏಕೆ ಕಪ್ಪು ಮತ್ತು ಗುಂಪಿನಲ್ಲಿರುವ ಹುಡುಗರನ್ನೇ ಇಷ್ಟಪಡುತ್ತಾರೆ ಎಂದು ಅಚ್ಚರಿಪಟ್ಟಿರುವಿರೇ? ಇದಕ್ಕೆ ಪರಸ್ಪರ ಆಕರ್ಷಣೆ ಒಂದು ಕಾರಣವಾದರೆ, ನೈತಿಕ ಕಲ್ಪನೆಯು ಇನ್ನೊಂದು ಕಾರಣವಾಗಿದೆ ಎಂದು ಸಂಶೋಧನೆಯೊಂದು ತಿಳಿಸುತ್ತದೆ.

ಸಂಶೋಧಕರು ಕಂಡುಕೊಂಡ ಪ್ರಕಾರ, ಪುರುಷರು ಸುಪ್ತ ಮನಸ್ಸಿನಲ್ಲಿ, ನಸು ಹೊಂಬಣ್ಣದಿಂದ ಆಕರ್ಷಿತರಾಗಿರುತ್ತಾರೆ. ಇದಕ್ಕೆ ಕಾರಣವೆಂದರೆ, ಬಿಳಿ ಬಣ್ಣವು ಸ್ವಚ್ಛತೆ, ಮುಗ್ಧತೆ, ವಿನಯವಂತಿಕೆ ಹಾಗೂ ಒಳ್ಳೆಯತನವನ್ನು ಪ್ರತಿನಿಧಿಸುತ್ತದೆ. ಹೆಣ್ಣು ಕಪ್ಪು ಬಣ್ಣದ ಗಂಡಿನಿಂದ ಆಕರ್ಷಿತವಾಗುವುದಕ್ಕೆ ಕಾರಣವೆಂದರೆ, ಸೆಕ್ಸ್, ಗಂಡಸುತನ ಹಾಗೂ ಅಪಾಯಕ್ಕೊಡ್ಡಿಕ್ಕೊಳ್ಳುವ ಧೀರತನದ ಕಾರಣದಿಂದ ಆಕರ್ಷಿತಳಾಗುತ್ತಾಳೆ.

"ನಮ್ಮ ಸಂಶೋಧನೆಗಳಿಂದ ತಿಳಿದುಬಂದ ಅಂಶವೆಂದರೆ, ಸೌಂದರ್ಯದ ಪ್ರಾಮುಖ್ಯತೆಯು ನಮ್ಮ ನೈತಿಕ ಪ್ರಾಮುಖ್ಯತೆಯನ್ನು ಪ್ರತಿಫಲಿಸುತ್ತದೆ. ನಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಹೆಣ್ಣು ಹೇಗೆ ಗಮನಿಸಲ್ಪಡುತ್ತಾಳೆ ಮತ್ತು ವರ್ತಿಸುತ್ತಾಳೆ ಎನ್ನುವ ಕೆಲವು ವಿಧಾನಗಳಿವೆ" ಎಂದು ಈ ಸಂಶೋಧನೆಯ ಪ್ರಮುಖ ಲೇಖಕ ಟೊರೆಂಟೋ ವಿಶ್ವ ವಿದ್ಯಾಲಯದ ಡಾ.ಶ್ಯೋನ್ ಬೌಮನ್ ತಿಳಿಸಿದ್ದಾರೆ.

"ಬಿಳಿ ಬಣ್ಣ ಹಾಗೂ ಕಪ್ಪು ಬಣ್ಣಕ್ಕೆ ಪ್ರತ್ಯೇಕವಾದ ಅರ್ಥಗಳನ್ನು ಕಲ್ಪಿಸಲಾಗಿದೆ.ನಾವು ಸುಪ್ತಾವಸ್ತೆಯಿಂದ ಆ ನೈತಿಕತೆಯನ್ನು ಹೆಣ್ಣಿಗೆ ಸಂಬಂಧ ಕಲ್ಪಿಸಿ ನೋಡುತ್ತೇವೆ" ಎಂದು ಅವರು ಹೇಳಿದ್ದಾರೆ.

ಸುಮಾರು 2000 ಗಂಡು ಹೆಣ್ಣಿನ ಜಾಹಿರಾತು ಫೋಟೋಗಳನ್ನು ಪರಿಶೀಲಿಸಿದ ನಂತರ ಸಂಶೋಧಕರು ಈ ನಿರ್ಣಯಕ್ಕೆ ಬಂದಿದ್ದಾರೆ.
ಹೀಗೆ ಪರಿಶೀಲಿಸುವಾಗ ಸೌಂದರ್ಯಕ್ಕೆ ನೆರವಾಗುವ ಕಾಲು, ಕಾಲಿನ ಉದ್ದ, ತೂಕ, ಮೂಗು ಮತ್ತು ಬಾಯಿಯ ಆಕಾರ ಮೊದಲಾದವುಗಳನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಇವು ಯಾವ ರೀತಿ ಸುಪ್ತಾವಸ್ತೆಯ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಪಾಕ್ ಸಂಸತ್ತಿನ ಚೊಚ್ಚಲ ಅಧಿವೇಶನ
ಟಿಬೆಟ್ ಭಯೋತ್ಪಾದಕರಿಂದ ಆಳಲ್ಪಡುತ್ತಿದೆ-ಲಾಮಾ
ಸರಬ್‌ಜಿತ್‌ನನ್ನು ನೇಣಿಗೇರಿಸದಿರಿ: ಪಾಕ್‌ಗೆ ಭಾರತ ಮನವಿ
ಫಾರೆನ್ಸಿಕ್ ಸಂಶೋಧನೆಗೆ ಗುರ್ಮುಖಿ ಬಳಕೆ
ಬ್ರಿಟನ್: ಭಾರತೀಯ ರೆಸ್ಟೋರೆಂಟ್ ಮಾಲಿಕರ ಪ್ರತಿಭಟನೆ
ಟೆಬೆಟ್ ನೀತಿ ಬದಲಾವಣೆಗೆ ಅಮೆರಿಕ ಕರೆ