ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಎಸ್ ಸಭಾಧ್ಯಕ್ಷೆ ಭಾರತ ಭೇಟಿ
ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಪ್ರಮುಖ ಕಾರ್ಯಸೂಚಿಯಾಗಿಸಿಕೊಂಡು ಅಮೆರಿಕ ಸಂಸತ್ತಿನ ಸಭಾಧ್ಯಕ್ಷೆ ನ್ಯಾನ್ಸಿ ಪೆಲೊಸಿ ಐದು ದಿನಗಳ ಭೇಟಿಗಾಗಿ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.

ಅಮೆರಿಕದ ಪ್ರಭಾವಶಾಲಿ ಡೆಮಾಕ್ರೆಟಿಕ್ ಸದಸ್ಯೆಯಾದ ಪೆಲೊಸಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇನ್ನಿತರ ಹಿರಿಯ ನಾಯಕರೊಂದಿಗೆ ಮಾರ್ಚ್ 20 ರಂದು ಅಧಿಕೃತ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಮೂಲಗಳು ತಿಳಿಸಿವೆ.

ಉಭಯ ದೇಶಗಳ ಭಾಂದವ್ಯ ವೃದ್ಧಿಗಾಗಿ ನಾಗರಿಕ ಪರಮಾಣು ಒಪ್ಪಂದ ಸೇರಿದಂತೆ ಪ್ರಮುಖ ವಿಷಯಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ನಾಗರಿಕ ಪರಮಾಣು ಒಪ್ಪಂದಕ್ಕೆ ಸಮಯ ನಿಗದಿಗಾಗಿ ಕಾಂಗ್ರೆಸ್‌ನೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ವಿದೇಶಾಂಗ ಮೂಲಗಳು ತಿಳಿಸಿವೆ.

ಪರಿಸರ ಸಮಸ್ಯೆ ಕುರಿತಂತೆ ಅಧಿಕೃತ ಮತ್ತು ಅನಧಿಕೃತ ಸಭೆಗಳಲ್ಲಿ ಪೆಲೊಸಿ ಚರ್ಚಿಸಬಹುದೆಂದು ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.


ಮತ್ತಷ್ಟು
ಹುಡುಗಿಯರಿಗೇಕೆ ಕರಿಯ ತ್ವಚೆಯ ಗಂಡಸರು ಇಷ್ಟ?
ಪಾಕ್ ಸಂಸತ್ತಿನ ಚೊಚ್ಚಲ ಅಧಿವೇಶನ
ಟಿಬೆಟ್ ಭಯೋತ್ಪಾದಕರಿಂದ ಆಳಲ್ಪಡುತ್ತಿದೆ-ಲಾಮಾ
ಸರಬ್‌ಜಿತ್‌ನನ್ನು ನೇಣಿಗೇರಿಸದಿರಿ: ಪಾಕ್‌ಗೆ ಭಾರತ ಮನವಿ
ಫಾರೆನ್ಸಿಕ್ ಸಂಶೋಧನೆಗೆ ಗುರ್ಮುಖಿ ಬಳಕೆ
ಬ್ರಿಟನ್: ಭಾರತೀಯ ರೆಸ್ಟೋರೆಂಟ್ ಮಾಲಿಕರ ಪ್ರತಿಭಟನೆ