ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಸ್ಥಾನ: ಜರ್ದಾರಿಗೆ ಫಹೀಮ್ ಬೆಂಬಲ
ನೂತನವಾಗಿ ರಚಿಸಲಿರುವ ಸಮ್ಮಿಶ್ರ ಸರಕಾರದಲ್ಲಿ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಲಾಗಿದೆ ಎಂದು ಪೀಪಲ್ಸ್ ಪಾರ್ಟಿ ಉಪಾಧ್ಯಕ್ಷ ಅಮಿನ್ ಫಹೀಮ್ ತಿಳಿಸಿದ್ದಾರೆ.

ನೀವು ಕೂಡಾ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಹೀಮ್ ನಾವು ಜರ್ದಾರಿ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಲಾಗಿದ್ದು ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

ನಾವು ಪಕ್ಷದ ಸಂಸದರ ವತಿಯಿಂದ ನಮ್ಮ ಪ್ರಧಾನಿ ಅಭ್ಯರ್ಥಿಯನ್ನಾಗಿ ಜರ್ದಾರಿಯನ್ನು ಸೂಚಿಸಿದ್ದೇವೆ. ಅದನ್ನು ಸ್ವೀಕರಿಸುವುದು ಅಥವಾ ನಿರಾಕರಿಸುವುದು ಜರ್ದಾರಿ ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಪೀಪಲ್ಸ್ ಪಾರ್ಟಿಯ ಪ್ರಧಾನಿ ಅಭ್ಯರ್ಥಿಯಾಗಿ ಫಹೀಮ್ ಮೂಂಚೂಣಿಯಲ್ಲಿದ್ದರು. ಆದರೆ ಜರ್ದಾರಿ ಅವರಿಗೆ ಮಾಹಿತಿ ನೀಡದೆ ಅಧ್ಯಕ್ಷ ಮುಷರಫ್ ಹಾಗೂ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನುವ ವಿಷಯ ಬಹಿರಂಗವಾದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಪ್ರಸ್ತಾಪಿಸುವುದು ಪಕ್ಷ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ನಾನು ಈಗಲೂ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿದ್ದೇನೆ ಎಂದು ಪೀಪಲ್ಸ್ ಪಾರ್ಟಿ ಉಪಾಧ್ಯಕ್ಷ ಅಮಿನ್ ಫಹೀಮ್ ತಿಳಿಸಿದ್ದಾರೆ.
ಮತ್ತಷ್ಟು
ಯುಎಸ್ ಸಭಾಧ್ಯಕ್ಷೆ ಭಾರತ ಭೇಟಿ
ಹುಡುಗಿಯರಿಗೇಕೆ ಕರಿಯ ತ್ವಚೆಯ ಗಂಡಸರು ಇಷ್ಟ?
ಪಾಕ್ ಸಂಸತ್ತಿನ ಚೊಚ್ಚಲ ಅಧಿವೇಶನ
ಟಿಬೆಟ್ ಭಯೋತ್ಪಾದಕರಿಂದ ಆಳಲ್ಪಡುತ್ತಿದೆ-ಲಾಮಾ
ಸರಬ್‌ಜಿತ್‌ನನ್ನು ನೇಣಿಗೇರಿಸದಿರಿ: ಪಾಕ್‌ಗೆ ಭಾರತ ಮನವಿ
ಫಾರೆನ್ಸಿಕ್ ಸಂಶೋಧನೆಗೆ ಗುರ್ಮುಖಿ ಬಳಕೆ