ಟಿಬೆಟ್‌ನ ರಾಜಧಾನಿ ಲ್ಹಾಸಾದಲ್ಲಿ ಪ್ರತಿಭಟನಾಕಾರರ ಮೇಲೆ ಚೀನಾ ಸೇನಾಪಡೆಗಳು ನಡೆಸುತ್ತಿರುವ ಹಿಂಸಾಚಾರವನ್ನು ಅಂತ್ಯಗೊಳಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ.
ಪ್ರತಿಭಟನೆಯನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೆಂದು ಸಲಹೆ ನೀಡಿದ್ದು ಚೀನಾದೊಂದಿಗೆ ಅಮೆರಿಕ ನಿರಂತರ ಸಂಪರ್ಕದಲ್ಲಿದೆ ಎಂದು ಬುಷ್ ಅಡಳಿತದ ಮಾಧ್ಯಮ ಕಾರ್ಯದರ್ಶಿ ಡಾನಾ ಪೆರಿನೊ ತಿಳಿಸಿದ್ದಾರೆ.
ಕೂಡಲೆ ಹಿಂಸಾಚಾರವನ್ನು ಅಂತ್ಯಗೊಳಿಸಿ ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ಚೀನಾ ದೇಶಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಪೆರಿನೊ ಹೇಳಿದ್ದಾರೆ.
ಟಿಬೆಟ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತಂತೆ ನಮಗೆ ಕಳವಳವಾಗುತ್ತಿದೆ. ಪ್ರತಿಭಟನಾಕಾರರನ್ನು ಚೀನಾ ಸರಕಾರ ಅಹಿಂಸಾತ್ಮಕವಾಗಿ ನಿಯಂತ್ರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
|