ಇರಾಕ್‌ನ ಕರ್ಬಲಾದಲ್ಲಿ ನಡೆದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ 36 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ಬಲಾದ ಇಮಾಮ್ ಹುಸೇನ್ ಮಸೀದಿಯ ಹತ್ತಿರದ ಮುಖೈಮ್ ಪ್ರದೇಶದಲ್ಲಿರುವ ಕಾಫಿ ಶಾಪ್‌ನಲ್ಲಿ ಮಹಿಳಾ ಬಾಂಬರ್ ತನ್ನನ್ನು ತಾನು ಸ್ಪೋಟಿಸಿಕೊಂಡ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.
ಸ್ಪೋಟ ಸಂಭವಿಸುತ್ತಲೇ ಪವಿತ್ರ ನಗರವಾದ ಕರ್ಬಲಾದಲ್ಲಿ ಮಸೀದಿಗೆ ಭೇಟಿ ನೀಡಿದ ಸಾವಿರಾರು ಭಕ್ತರಲ್ಲಿ ಆತಂಕದಿಂದಾಗಿ ಕೆಲ ಕಾಲ ಉದ್ರಿಕ್ತ ಸ್ಥಿತಿ ಉಂಟಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ಬಲಾ ನಗರ ಶಿಯಾ ಮೌಲ್ವಿ ಮೊಕ್ತದಾ ಅಲ್-ಸದ್ರ್ ಹಾಗೂ ಇರಾಕಿ ಸೇನಾಪಡೆ ಮತ್ತು ಉಗ್ರರ ಘರ್ಷಣೆಯ ತಾಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|