ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಶಾಂತಿಯ ಕುರಿತಂತೆ ಮಾತನಾಡುವ ಒಬ್ಬ ಸುಳ್ಳುಗಾರ ಎಂದು ಚೀನಾದ ಪ್ರಧಾನಿ ವೆನ್ ಜಿಯೋಬೊ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಕಳೆದ ವಾರ ನಡೆದ ಹಿಂಸಾಚಾರದಲ್ಲಿ ಅನೇಕರು ಸಾವನ್ನಪ್ಪಿದ ಪ್ರಕರಣದಲ್ಲಿ ದಲೈಲಾಮಾ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಲ್ಹಾಸಾದಲ್ಲಿ ನಡೆಯುತ್ತಿರುವ ಘಟನೆಗಳು ಪೂರ್ವಯೋಜಿತ, ಸಂಘಟಿತ, ಪ್ರಚಂಡ ಧೀಮಂತ ದಲೈಲಾಮಾ ಕೈವಾಡವಿರುವದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಲ್ಹಾಸಾದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಲ್ಲಿ ಶಾಂತಿ ಸ್ಥಾಪಿಸಬೇಕೆನ್ನುವ ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಮಾತುಕತೆಗಳು ಕೇವಲ ಸುಳ್ಳಿನ ಕಂತೆಗಳಾಗಿವೆ ಎಂದು ಹೇಳಿದ್ದಾರೆ.
|