ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲೇಷಿಯಾ ಸಂಪುಟದಲ್ಲಿ ಭಾರತೀಯರಿಗೆ ಕೊಕ್
ಅಧಿಕಾರಕ್ಕೆ ಬಂದ ಹತ್ತು ದಿನಗಳ ನಂತರ ಮಲೇಷಿಯಾದ ಪ್ರಧಾನಿ ಅಬ್ದುಲ್ ಅಹ್ಮದ್ ಬದವೈ ಭಾರತೀಯ ಮೂಲದವರನ್ನು ಹೊರತುಪಡಿಸಿ ಸಂಪುಟವನ್ನು ಪುನರ್‌ರಚಿಸಿದ್ದಾರೆ.

ಕಳೆದ ವರ್ಷ ಭಾರತೀಯ ಮೂಲದವರಿಂದ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರತೀಯರನ್ನು ಹೊರತುಪಡಿಸಿ ಸಂಪುಟವನ್ನು ಪುನರ್‌ರಚಿಸಿದ್ದಾರೆ. ಕಳೆದ ಬಾರಿಯ ಸಂಪುಟದಲ್ಲಿ ಭಾರತೀಯ ಮೂಲದ ಲೋನೆ ಅವರು ಸಂಪುಟದರ್ಜೆಯ ಸಚಿವರಾಗಿದ್ದರು.

1974ರಿಂದ ಸತತವಾಗಿ ಮಲೇಷಿಯನ್ ಇಂಡಿಯನ್ ಕಾಂಗ್ರೆಸ್ ಸಂಸದರಾಗಿದ್ದ ವೆಲ್ಲು ಅವರನ್ನು ಬದವೈ ಮೀಸಲಾಗಿಟ್ಟಿದ್ದು ಮತ್ತು ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಿಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.

ಕಳೆದ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದರೂ ಬದವೈ ಹಣಕಾಸು ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿರುವುದು ಪಕ್ಷದಲ್ಲಿ ಅಸಮಧಾನ ಮೂಡಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

68ರ ಹರೆಯದ ಪ್ರಧಾನಿ ಅಬ್ದುಲ್ ಅಹ್ಮದ್ ಬದವೈ90 ಸಚಿವ ಸ್ಥಾನಗಳಿಂದ 68 ಸಚಿವ ಸ್ಥಾನಗಳಿಗೆ ಸಂಪುಟವನ್ನು ಕಡಿತಗೊಳಿಸಿದ್ದಾರೆ. ನೂತನ ಸಚಿವರುಗಳಿಂದ ಉತ್ತಮ ಕಾರ್ಯನಿರೀಕ್ಷಿಸಲು ಸಾಧ್ಯ ಎಂದು ಬದಾವೈ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ದಲೈಲಾಮಾ ಸುಳ್ಳುಗಾರ-ಚೀನಾ
ಆತ್ಮಹತ್ಯಾ ದಾಳಿ: 36 ಮಂದಿ ಸಾವು
ಲ್ಹಾಸಾ: ಹಿಂಸಾಚಾರ ಅಂತ್ಯಕ್ಕೆ ಯುಎಸ್ ಆಗ್ರಹ
ಮಲೇಷಿಯಾ:ಪ್ರಧಾನಿಯಿಂದ ಸಂಪುಟ ಪುನರ್‌ರಚನೆ
ಪ್ರಧಾನಿ ಸ್ಥಾನ: ಜರ್ದಾರಿಗೆ ಫಹೀಮ್ ಬೆಂಬಲ
ಯುಎಸ್ ಸಭಾಧ್ಯಕ್ಷೆ ಭಾರತ ಭೇಟಿ