ಸಮ್ಮಿಶ್ರ ಸರಕಾರ ರಚನೆಯಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್ )ಪಕ್ಷಗಳು ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಮ್ಮತಿ ಸೂಚಿಸಿವೆ.
ಉಭಯ ಪಕ್ಷಗಳ ಸಭೆಯ ನಂತರ ಮಾತನಾಡಿದ ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್ ) ನಾಯಕ ನಿಸಾರ್ ಅಲಿ ಖಾನ್, ಸಂಸತ್ ಮತ್ತು ವಿಧಾನಸಭೆಗಳಲ್ಲಿರುವ ಬಲಾಬಲವನ್ನು ಆಧರಿಸಿ ಸಂಪುಟದಲ್ಲಿ ಸಚಿವ ಸ್ಥಾನಗಳ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಹಂತದ ಸಂಪುಟ ರಚನೆಯಲ್ಲಿ ಸುಮಾರು 20 ಮಂದಿ ಸಚಿವರನ್ನು ನೇಮಕ ಮಾಡಲಾಗುವುದು.ಮಾಜಿ ಪ್ರಧಾನಿ ಶೌಕತ್ ಅಜೀಜ್ ಅವರ ಸಂಪುಟದ ಗಾತ್ರಕ್ಕಿಂತ ಕಿರಿದಾಗಿರುತ್ತದೆ ಎಂದು ಹೇಳಿದ್ದಾರೆ.
ಹಿಂದಿನ ಸರಕಾರದ ಉಪೇಕ್ಷೆಗೆ ಒಳಗಾಗಿದ್ದ ಸಂಸತ್ತಿನ ಇನ್ನಿತರ ಉನ್ನತ ಸ್ಥಾನಗಳನ್ನು ವಿರೋಧಪಕ್ಷಗಳಿಗೆ ನೀಡಲಾಗುವುದು. ವಿದೇಶಾಂಗ, ಹಣಕಾಸು ಸಚಿವ ಸ್ಥಾನಗಳನ್ನು ಪ್ರಧಾನ ಮಂತ್ರಿಯವರ ಆಧೀನಕ್ಕೆ ಒಳಪಟ್ಟಿವೆ ಎಂದು ಹೇಳಿದ್ದಾರೆ.
ಮುಂಬರುವ ಸರಕಾರ ರಾಷ್ಟ್ರೀಯ ಹಣಕಾಸು ಆಯೋಗ ಮತ್ತು ಸಂಸದೀಯ ಸಮಿತಿಗಳ ರಚನೆಯನ್ನು ಪುನಶ್ಚೇತನಗೊಳಿಸಲಿದೆ ಎಂದು ವಿರೋಧಪಕ್ಷದ ನಾಯಕರಾದ ರಾಜಾ ರಬ್ಬಾನಿ ತಿಳಿಸಿದ್ದಾರೆ.
|