ಶಾಲೆಗಳನ್ನು ಬಿಟ್ಟು ಮದರಸಾಗಳಲ್ಲಿ ದಾಖಲಾತಿ ಪಡೆಯುವಂತೆ ಉಗ್ರರು ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಪಾಕ್‌ನ ಆಗ್ನೆಯ ಭಾಗದಲ್ಲಿರುವ ದರ್ರಾ ಆದಮ್ ಖೇಲ್ ಪಟ್ಟಣದಲ್ಲಿ ಉಗ್ರರು ಶಾಲೆಯನ್ನು ಬಾಂಬ್‌ನಿಂದ ಸ್ಪೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ರಾತ್ರಿ ಉಗ್ರರು ನಡೆಸಿದ ಬಾಂಬ್‌ಸ್ಪೋಟಕ್ಕೆ ಒಂಬತ್ತು ರೂಮ್‌ಗಳುಳ್ಳ ಶಾಲಾ ಕಟ್ಟಡ ಸಂಪೂರ್ಣನಾಶವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಸಂಸ್ಥೆಯನ್ನು ಮುಚ್ಚುವಂತೆ ಅಡಳಿತ ಮಂಡಳಿಗೆ ಹಲವಾರು ಬೆದರಿಕೆ ಪತ್ರಗಳನ್ನು ರವಾನಿಸಿದ್ದಲ್ಲದೇ ಎರಡು ದಿನಗಳ ಹಿಂದೆ ಸ್ಥಳಿಯ ಉಗ್ರರು ವಿದ್ಯಾರ್ಥಿನಿಯರಿಗೆ ಶಾಲೆಯನ್ನು ಬಿಟ್ಟು ಮದರಸಾವನ್ನು ಸೇರುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ತಾಲಿಬಾನ್ ಬೆಂಬಲಿಗರನ್ನು ಸದೆಬಡೆಯಲು ಪಾಕ್ ಸೇನೆ ದರ್ರಾ ಆದಮ್ ಖೇಲ್ ಪ್ರದೇಶದಲ್ಲಿ ಭಾರಿ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಆದರೆ ಭಯೋತ್ಪಾದನೆ ಕಡಿಮೆಯಾಗುವ ಬದಲು ಸೇನೆಯ ಸಮ್ಮುಖದಲ್ಲಿ ಭಯೋತ್ಪಾದಕರು ಯಾವುದೇ ಹೆದರಿಕೆ ಇಲ್ಲದೇ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಮೂರು ದಿನಗಳಲ್ಲಿ ಉಗ್ರರು ಮೂರು ಸೇನಾ ಚೆಕ್‌ಪೋಸ್ಟ್‌ಗಳು ಹಾಗೂ ಶಾಲಾ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ.
|