ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಲಂಡನ್‌ನಿಂದ ಕರಾಚಿಗೆ ಆಗಮಿಸಿದ್ದು, ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನು ಸೂಚಿಸಲಿದ್ದಾರೆ ಎಂದು ಪಾಕ್ ಮೂಲಗಳು ತಿಳಿಸಿವೆ.
ಲಂಡನ್‌ನಿಂದ ನೇರವಾಗಿ ಕರಾಚಿಗೆ ಆಗಮಿಸಿದ್ದು, ತಕ್ಷಣವೆ ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ವಕ್ತಾರರು ತಿಳಿಸಿದ್ದಾರೆ.
ಆಕ್ಸಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ ಬಿಲಾವಲ್ ಕಳೆದ ವರ್ಷ ಡಿಸೆಂಬರ್ 27ರಂದು ತಾಯಿ ಬೇನ್‌ಜಿರ್ ಭುಟ್ಟೋ ಅವರ ಹತ್ಯೆಯಾದ ಮೂರು ದಿನಗಳ ನಂತರ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
|