ಟಿಬೆಟ್ ಗಲಭೆಗೆ ಸಂಬಂಧಪಟ್ಟಂತೆ, ಪೊಲೀಸರು ತಮ್ಮ ಕ್ರಮವನ್ನು ಕೈಗೊಳ್ಳುವ ಮುನ್ನ ಲ್ಹಾಸಾದಲ್ಲಿ 105 ಮಂದಿ ಪ್ರತಿಭಟನೆಗಾರರು ಶರಣಾಗಿದ್ದಾರೆ. ಎರಡು ದಶಕಗಳಲ್ಲಿ ಮೊದಲ ಬಾರಿಗೆ ಟಿಬೆಟಿನಲ್ಲಿ ದೊಡ್ಡ ಗಲಭೆಯೊಂದು ಶುಕ್ರವಾರದಿಂದ ಆರಂಭವಾಗಿತ್ತು. ಬಂಡಾಯಗಾರರಿಗೆ ಸೋಮವಾರ ಮಧ್ಯರಾತ್ರಿವರೆಗೆ ಶರಣಾಗತಿ ಅವಧಿಯನ್ನು ಟಿಬೆಟ್ ಪ್ರಾದೇಶಿಕ ಸರಕಾರವು ನಿಗದಿ ಪಡಿಸಿತ್ತು. ಈ ನಿರ್ಧಾರಕ್ಕೆ ಮಣಿದವರ ವಿರುದ್ದ ಮೃದು ಸ್ವಭಾವ ತೋರಲು, ಮತ್ತು ಅನುಸರಿಸದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿಕೆ ನೀಡಿತ್ತು. ಶರಣಾದವರಲ್ಲಿ ಎಲ್ಲರೂ, ಹೊಡೆತ, ಥಳಿತ, ಸುಲಿಗೆ ಮತ್ತು ಬಂಡಾಯದಲ್ಲಿ ಶಾಮೀಲಾದವರು ಎಂದು ಪ್ರಾದೇಶಿಕ ಸರಕಾರದ ಉಪಾಧ್ಯಕ್ಷ ಬೇಮ ಚಿಲಿಯನ್ ಅವರು ಹೇಳಿದ್ದಾರೆ. ಗಲಭೆಕೋರರು ಬ್ಯಾಂಕ್, ಸರಕಾರಿ ಕಟ್ಟಡ, ಶಾಲೆ, ಅಂಗಡಿಗಳ ಮೇಲೆ ಆಕ್ರಮಣ ಮಾಡಿದ್ದರು. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಗಲಭೆ ಆರಂಭಗೊಂಡಾಗ ಸುಮಾರು 300ಕ್ಕಿಂತಲೂ ಅಧಿಕ ಸ್ಥಳಗಳಲ್ಲಿ ಬೆಂಕಿ ಹಚ್ಚಿದ್ದರು. ಇದೇ ವೇಳೆ 13ಜನರ ಕೊಲೆ ಅಥವಾ ಸುಡಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ನಷ್ಟವು ಯುಎಸ್‌ಡಿ 14ಮಿಲಿಯನ್ ಮೀರಿ ನಷ್ಟ ಸಂಭವಿಸಿದ್ದು, ಗಲೆಭೆಯಲ್ಲಿ 373ಜನರು ಮತ್ತು 32 ಉಧ್ಯಮ ಸಂಸ್ಥೆಗಳ ನಾಶ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯೊಂದು ಬಹಿರಂಗಪಡಿಸಿದೆ.
|