ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಪ್ರಧಾನಿ ಹುದ್ದೆ ನಿರ್ಧಾರ: ಪಿಪಿಪಿ
ಪಾಕಿಸ್ತಾನ ಪ್ರಧಾನಿ ಸ್ಥಾನಕ್ಕೆ ಪಿಪಿಪಿಯ ಅಭ್ಯರ್ಥಿತನದ ಕುರಿತು ಅನಿಶ್ಚಿತತೆ ಎಲ್ಲಡೆ ಹರಡುವಂತೆ, ಪ್ರಧಾನಿ ಪಟ್ಟಕ್ಕೆ ಅಭ್ಯರ್ಥಿ ಹೆಸರನ್ನು ತೀರ್ಮಾನಿಸಲಾಗಿದೆ ಎಂದು ಪಿಪಿಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಪಿಪಿಪಿ ಉಪಾಧ್ಯಕ್ಷ ಮಖ್ದೂಮ್ ಆಮಿನ್ ಫಾಹಿಂ ಅವರ ಹೆಸರು ಇನ್ನೂ ಕೂಡ ಪ್ರಧಾನಿ ಸ್ಥಾನದಲ್ಲಿ ಇರುವುದಾಗಿ ಸೂಚಿಸಿದ್ದಾರೆ.

ಪಿಪಿಪಿ ಪಕ್ಷಾಧ್ಯಕ್ಷ ಆಸಿಫ್ ಆಲಿ ಜರ್ದಾರಿ ಅವರು ಪ್ರಧಾನಿ ಸ್ಥಾನಕ್ಕೆ ಅರ್ಹ ಎಂದು ಹೇಳಿದ್ದ ಫಾಹಿಂ, ಈ ಕುರಿತಾಗಿ ಯಾವುದೇ ಅಧಿಕೃತ ಘೋಷಣೆ ನಡೆಯಲಿಲ್ಲ, ಇನ್ನೋರ್ವ ಸ್ಪರ್ಥಿಯಾದ ಯೂಸೂಫ್ ರಾಜಾ ಗಿಲ್ಲಾನಿಯು ನನ್ನ ಗೆಳೆಯ ಮತ್ತು ಸಹೋದರ. ನಮ್ಮ ನಡುವೆ ಯಾವುದೇ ತಾರತಮ್ಯವಿಲ್ಲ ಎಂದರು.

ಪಿಪಿಪಿಯಿಂದ ಅಧಿಕೃತ ಘೋಷಣೆಯಾಗುವವರೆಗೂ ಕಾಯಬೇಕು. ಸ್ಪೀಕರ್ ಸ್ಥಾನಕ್ಕೆ ಸಿಂಧ್ ಪ್ರಾಂತ್ಯದ ಅಭ್ಯರ್ಥಿಯನ್ನು ಮತ್ತು ಉಪ ಸ್ಪೀಕರ್ ಹುದ್ದೆಗೆ ವಾಯುವ್ಯ ಗಡಿ ಪ್ರಾಂತ್ಯದ ಅಭ್ಯರ್ಥಿಯ ಹೆಸರು ಸೂಚಿಸಬೇಕು ಎಂಬ ಪಿಪಿಪಿ ನಿರ್ಧಾರದ ನಂತರದಲ್ಲಿ, ಫಾಹಿಂ ಅವರ ಪ್ರಧಾನಿ ಸ್ಥಾನ ಅವಕಾಶವು ದುರ್ಬಲಗೊಂಡಿತ್ತು ಎಂದು ತಿಳಿಸಿದ್ದಾರೆ.

ಪ್ರಧಾನಿ ಹುದ್ದೆಗೆ ಪಂಜಾಬಿನ ಅಭ್ಯರ್ಥಿಯನ್ನು ನಾಮಕರಣ ಮಾಡಲು ಪಿಪಿಪಿ ಉದ್ದೇಶಿಸುವ ಕಾರಣವಾಗಿ ಫಾಹಿಂ ಅವರ ಅಭ್ಯರ್ಥಿತನವು ಅಸಂಭವನೀಯ ಎಂದಿದ್ದಾರೆ.

ಈ ಎಲ್ಲಾ ಸಲಹೆಗಳನ್ನು ಫಾಹಿಂ ಅಲ್ಲಗಳೆದಿದ್ದು, ಪಿಎಂಎಲ್ ನವಾಜ್ ಅವರ ಪ್ರಧಾನಿ ಅವಧಿ ಸಂದರ್ಭದಲ್ಲಿ ಅಧ್ಯಕ್ಷ, ಪ್ರಧಾನಿ ಮತ್ತು ಪ್ರಾಂತೀಯ ಮುಖ್ಯಮಂತ್ರಿಗಳೆಲ್ಲರು ಪಂಜಾಬ್ ನಿವಾಸಿಗಳಾಗಿದ್ದರು. ಇದಕ್ಕೆ ಇನ್ನೂ ಸಮಯಾವಕಾಶವಿರುವ ಕುರಿತು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ಯೂಸೂಫ್ ರಾಜಾ ಗಿಲಾನಿ ಅವರು ಪಾಕ್ ಪ್ರಧಾನಿ ಪಟ್ಟಕ್ಕೆ ಪಮುಖ ಅಭ್ಯರ್ಥಿಯಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಮತ್ತಷ್ಟು
ಟಿಬೆಟ್ : ಪ್ರತಿಭಟನೆಗಾರರು ಶರಣು
ಭದ್ರತಾ ವಿಸ್ತರಣಾ ಕರಡು ತಿರಸ್ಕೃತ
ಭಾರತ ಸರಕಾರವೇನೂ ಭಿನ್ನವಲ್ಲ: ತಸ್ಲೀಮಾ
ಬಿಲಾವಲ್‌‌ರಿಂದ ಪ್ರಧಾನಿ ಅಭ್ಯರ್ಥಿ ಘೋಷಣೆ
ಉಗ್ರರಿಂದ ವಿದ್ಯಾರ್ಥಿನಿಯರ ಶಾಲೆ ಸ್ಪೋಟ
ಪಾಕ್: ಸಮ್ಮಿಶ್ರ ಸಂಪುಟಕ್ಕೆ ಅಸ್ತು