ಮಲೇಷಿಯಾ ಸಂಸತ್ತಿಗೆ ವಿರೋಧ ಪಕ್ಷದ ನಾಯಕಿಯಾಗಿ ವ್ಯಾನ್ ಅಜಿಝಿಹಾ ವ್ಯಾನ್ ಅವರು ಆಯ್ಕೆಯಾಗಿದ್ದು ದೇಶದ ಪ್ರಥಮ ಮಹಿಳೆಯಾಗಿದ್ದಾರೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.
ಸಂಸತ್ತಿನಲ್ಲಿ ಅತಿ ದೊಡ್ಡ ವಿರೋಧ ಪಕ್ಷವನ್ನು ವ್ಯಾನ್ ಅಜಿಝಿಹಾ ವ್ಯಾನ್ ಪ್ರತಿನಿಧಿಸುತ್ತಿದ್ದು ಮಾರ್ಚ್ 8 ರಂದು ಆಯ್ಕೆಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರ್ತಿ ಕೆದಲೈ ರಾಖ್ಯಾತ್ (ಪಿಕೆಆರ್) 31 ಸೀಟುಗಳಲ್ಲಿ ಜಯ ಸಾಧಿಸಿದ್ದು,ಡೆಮಾಕ್ರೆಟಿಕ್ ಅಕ್ಷನ್ ಪಾರ್ಟಿ 28 ಸೀಟುಗಳು ಹಾಗೂ ಪನ್-ಮಲೇಷಿಯನ್ ಇಸ್ಲಾಮಿಕ್ ಪಾರ್ಟಿ 23 ಸೀಟುಗಳಲ್ಲಿ ಜಯ ಸಾಧಿಸಿದೆ.
ಮೊಹಾತೀರ್ ಅಹ್ಮದ್ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರ ಆಪಾದನೆ ಸೇರಿದಂತೆ ಇನ್ನಿತರ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಚುನಾವಣೆಯಿಂದ ಸ್ಪರ್ಧಿಸಲು ಅನರ್ಹತೆ ಪಡೆದ ವಿವಾದಾತ್ಮಕ ಉಪಪ್ರಧಾನಿಯಾಗಿದ್ದ ಅನ್ವರ್ ಇಬ್ರಾಹಿಂ ಅವರ ಪತ್ನಿ ವ್ಯಾನ್ ಅಜಿಝಿಹಾ ವ್ಯಾನ್ ವಿರೋಧ ಪಕ್ಷದ ನಾಯಕಿಯಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಪ್ರಸಕ್ತ ವರ್ಷ ಅನ್ವರ ಇಬ್ರಾಹಿಂ ಅವರ ಚುನಾವಣೆಗೆ ಸ್ಪರ್ಧಿಸದಿರುವ ನಿಷೇಧ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ವಿರೋಧ ಪಕ್ಷ ನಾಯಕಿ ಸ್ಥಾನವನ್ನು ವಹಿಸುವಂತೆ ವ್ಯಾನ್ ಅಜಿಝಿಹಾ ವ್ಯಾನ್ ಅವರಿಗೆ ವಿರೋಧ ಪಕ್ಷಗಳು ಮನವಿಮಾಡಿವೆ.
|