ಟಿಬೇಟ್ ಸಮಸ್ಯೆಗೆ ಸಂಬಂಧಪಟ್ಟಂತೆ ಚೀನಾ ಹಿಂಸಾತ್ಮಕ ನೀತಿಯನ್ನು ಅನುಸರಿಸುತ್ತಿದ್ದು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಒಟ್ಟಿಗೆ ಸೇರಿ ಟಿಬೇಟ್ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮಶಾಲಾದಲ್ಲಿ ಟಿಬೇಟಿನ ಆದ್ಯಾತ್ಮಿಕ ಗುರು ದಲೈ ಲಾಮಾ ಅವರನ್ನು ಭೇಟಿಯಾಗಿ ಟಿಬೇಟಿಯನ್ ನಾಗರಿಕರ ವಿರುದ್ಧ ಚೀನಾ ಸರಕಾರ ನಡೆಸಿದ ದಬ್ಬಾಳಿಕೆ ಕುರಿತು ಚರ್ಚೆ ನಡೆಸಿದರು.
ನೆಲ್ಸನ್ ಅಲ್ಡ್ರಿಚ್ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಮೆರಿಕಕ್ಕೆ ದಲೈ ಲಾಮಾ ಬೇಟಿ ನೀಡಿದ ಸಂದರ್ಭದಲ್ಲಿ ಬಾಲ್ಯಾವಸ್ಥೆಯಲ್ಲಿದ್ದ ನ್ಯಾನ್ಸಿ ಅವರು ಅಂದಿನ ಅಧ್ಯಕ್ಷ ನೆಲ್ಸನ್, ದಲೈ ಲಾಮಾರಿಗೆ ಚಿನ್ನದ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದನ್ನು ಸ್ಮರಿಸಿಕೊಂಡರು.
ಧರ್ಮಶಾಲಾದಲ್ಲಿ ಅದ್ದೂರಿಯ ಸ್ವಾಗತ ಸ್ವೀಕರಿಸಿದ ನ್ಯಾನ್ಸಿ ಪೆಲೋಸಿ ಅವರು, ಚೀನಾ ನಿಸ್ಸಂಶಯವಾಗಿ ಟಿಬೇಟ್‌ನ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಸ್ವಾತಂತ್ರ್ಯ ಗಳಿಕೆಗಾಗಿ ಟಿಬೇಟ್ ನಡೆಸುತ್ತಿರುವ ಹೋರಾಟಕ್ಕೆ ಅಮೆರಿಕ ಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಪೆಲೋಸಿ- ದಲೈ ಲಾಮಾ ಭೇಟಿಯನ್ನು ಚೀನಾ ವಿರೋಧಿಸುತ್ತಿದ್ದು. ಈ ನಿಟ್ಟಿನಲ್ಲಿ ಚೀನಾ ಪೆಲೋಸಿ ಭೇಟಿಯಿಂದ ಉಂಟಾಗುವ ಪರಿಣಾಮಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಪೆಲೋಸಿ ಮತ್ತು ಲಾಮಾ ಬೇಟಿಯ ಸಂದರ್ಭದಲ್ಲಿ ಅಮೆರಿಕದ 9 ಸೆನೆಟ್ ಸದಸ್ಯರು ಜೊತೆಗಿದ್ದರು.
ದಲೈ ಲಾಮಾ ಅವರೊಂದಿಗೆ ಮಾತುಕತೆಯ ನಂತರ ನ್ಯಾನ್ಸಿ ಪೆಲೋಸಿ ಅವರು ಪ್ರಧಾನಿ ಮನ್‌ಮೋಹನ್ ಸಿಂಗ್ ಮತ್ತು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಒಪ್ಪಂದದ ಜಾರಿ ಬುಷ್ ಆಡಳಿತಾವಧಿಯಲ್ಲಿ ಆಗಬೇಕಾದ ಅನಿವಾರ್ಯತೆ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
|