ಮಿಸಿಸಿಪ್ಪಿ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದವರನ್ನು ಗುಲಾಮರಂತೆ ನೋಡಲಾಗುತ್ತಿದೆ ಎಂದು ಆರೋಪಿಸಿ ವಾಷಿಂಗ್ಟನ್ ನಗರಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸುತ್ತಿರುವ ಭಾರತೀಯ ಮೂಲದ ಕಾರ್ಮಿಕರನ್ನು ಅಮೆರಿಕದಲ್ಲಿ ಇರುವ ಭಾರತೀಯ ರಾಯಭಾರಿ ರೊನೇನ್ ಸೇನ್ ಭೇಟಿಯಾಗಲು ತೀರ್ಮಾನಿಸಿದ್ದಾರೆ. ಈ ಕಾರಣದಿಂದ ವಾಷಿಂಗ್ಟನ್ ನಗರದ ಹೊರಗಡೆ ಒಪ್ಪಿಕೊಂಡಿದ್ದ ಕೆಲವು ಕೆಲಸಗಳನ್ನು ರದ್ದುಗೊಳಿಸಿದ್ದಾರೆ.
ಕಳೆದ ದಿ.17ರಂದು ಭಾರತೀಯ ಮೂಲದ ಕಾರ್ಮಿಕರನ್ನು ಉಭಯ ಪಕ್ಷಗಳಿಗೂ ಸೂಕ್ತವಾದ ದಿನದಂದು ಭೇಟಿಯಾಗಿ ಅವರು ಎದುರಿಸುತ್ತಿರುವ ಕಾರ್ಮಿಕ ಸಮಸ್ಯೆಗಳನ್ನು ಆಲಿಸುವುದಾಗಿ ಹೇಳಿದ್ದರು. ಭಾರತೀಯ ನಾಗರಿಕನಿಗೆ ರಾಯಭಾರಿ ಕಚೇರಿಗೆ ಸದಾಕಾಲ ತೆರೆದಿದ್ದು ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದರು.
ನಂತರ ಕಾರ್ಮಿಕರ ಗುಂಪೊಂದು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ವಾಷಿಂಗ್ಟನ್‌ಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಅಲ್ಲಿ ದಿ. 26ರಂದು ರೊನೇನ್ ಸೇನ್ ಅವರನ್ನು ಭೇಟಿಯಾಗಲು ತೀರ್ಮಾನಿಸಿದೆ.
|