ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನಾಂಗೀಯ ನಿಂದನೆ ವಿರುದ್ಧ ಹೋರಾಟಕ್ಕೆ ಬಾನ್ ಕರೆ
ಜಾಗತಿಕ ಸಮುದಾಯ ಮತ್ತು ನಾಗರಿಕ ಸೇವಾ ಸಂಘಟನೆಗಳು ಜನಾಂಗೀಯ ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಸಂಯುಕ್ತ ರಾಷ್ಟ್ರ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಕರೆ ನೀಡಿದ್ದಾರೆ.

ಜನಾಂಗೀಯ ತಾರತಮ್ಯ ವಿರುದ್ಧ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಬಾನ್ ಅವರು 2001ರಿಂದ ಜನಾಂಗೀಯ ತಾರತಮ್ಯದ ವಿರುದ್ಧದ ಜಾಗತಿಕ ಸಂಸ್ಥೆಗಳು ಕೈಗೊಂಡ ಕ್ರಮಗಳ ಪರಿಶೀಲನೆಯನ್ನು ಮಾಡಲಾಗುವುದು. ಪರದೇಶದವರ ಕುರಿತು ಇರುವ ಭಯ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಅಸಹನೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕ್ರೀಯಾಯೋಜನೆಯನ್ನು ರೂಪಿಸಲಾಗುವುದು ಎಂದು ಬಾನ್ ಹೇಳಿದರು.

ಜನಾಂಗೀಯ ತಾರತಮ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ ತೆಗೆದುಕೊಳ್ಳಲಾಗಿರುವ ಕ್ರಮಗಳ ಪರಿಶೀಲನೆಯು ನಮಗೆ ಭವಿಷ್ಯತ್ತಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚಿಂತನೆ ಮಾಡಲು ಸೂಕ್ತ ವೇದಿಕೆ ನಿರ್ಮಿಸಿದ್ದು, ಅಲ್ಲದೇ ಇರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜನಾಂಗೀಯ ತಾರತಮ್ಯ ನೀತಿಯ ವಿರುದ್ಧ ನಡೆಸುವ ಸಂಘಟಿತ ಪ್ರಯತ್ನವು ಫಲ ನೀಡುವ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

1960ರಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು ಪ್ರತಿಭಟನಾಕಾರರು ದಕ್ಷಿಣ ಆಫ್ರಿಕದ ಶಾರ್ಪವಿಲ್ಲೆಯಲ್ಲಿ ಹತ್ಯೆಯಾದ ಘಟನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ದಕ್ಷಿಣ ಆಫ್ರಿಕದಲ್ಲಿ ಆಗ ಜಾರಿಯಲ್ಲಿದ್ದ ಪಾಸ್ ಕಾನೂನು ಈಗ ಜಾರಿಯಲ್ಲಿ ಇಲ್ಲ. 60ರ ದಶಕಕ್ಕೆ ಹೋಲಿಸಿದಲ್ಲಿ ಜನಾಂಗೀಯ ತಾರತಮ್ಯ ಭೇದ ಭಾವ ನೀತಿ ಕಡಿಮೆಯಾಗಿದೆ. ಆದರೂ ಅಲ್ಲಲ್ಲಿ ಉಳಿದುಕೊಂಡಿರುವ ಜನಾಂಗೀಯ ತಾರತಮ್ಯ ನೀತಿ ಜಗತ್ತಿನ್ನು ಪೀಡುಗಿನಂತೆ ಕಾಡುತ್ತಿದೆ ಎಂದು ಹೇಳಿದರು.
ಮತ್ತಷ್ಟು
ಭಾರತೀಯ ಕಾರ್ಮಿಕರಿಗೆ ಕಾಯುತ್ತಿರುವ ರೊನೇನ್ ಸೇನ್
ಟಿಬೇಟಿಯನ್‌ರನ್ನು ತುಳಿಯುತ್ತಿರುವ ಚೀನಾ : ಪೆಲೋಸಿ
ವಿರೋಧ ಪಕ್ಷದ ನಾಯಕಿಯಾಗಿ ವ್ಯಾನ್
ಪಾಕ್ ಪ್ರಧಾನಿ ಹುದ್ದೆ ನಿರ್ಧಾರ: ಪಿಪಿಪಿ
ಟಿಬೆಟ್ : ಪ್ರತಿಭಟನೆಗಾರರು ಶರಣು
ಭದ್ರತಾ ವಿಸ್ತರಣಾ ಕರಡು ತಿರಸ್ಕೃತ