ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾಗೆ ರಿಚರ್ಡ್ಸನ್ ಬೆಂಬಲ
ಮೆಕ್ಸಿಕೋ ಗವರ್ನರ್ ಬಿಲ್ ರಿಚರ್ಡ್ಸನ್ ಡೆಮೊಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮರಿಗೆ ಬೆಂಬಲ ಸೂಚಿಸಿದ್ದು, ಇದರಿಂದ ತಮ್ಮ ಮಾಜಿ ಪಾದ್ರಿಯ ಹೇಳಿಕೆಯಿಂದ ಹಿನ್ನಡೆಗೊಳಗಾಗಿದ್ದ ತಮ್ಮ ಚುನಾವಣಾ ಪ್ರಚಾರಕ್ಕೆ ಬಲ ಸಿಕ್ಕಂತಾಗಿದೆ.

ಈ ಕಡೆ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಈ ಮುಂಚೆ ನಾಮನಿರ್ದೇಶನ ಸ್ಪರ್ಧೆಯಿಂದ ಹೊರಬಿದ್ದಿದ್ದ ರಿಚರ್ಡ್ಸನ್‌ರ ಸಮರ್ಥನೆ ಪಡೆಯಲು ಸಕ್ರೀಯವಾಗಿ ಭಾರಿ ಮಟ್ಟಿನ ಲಾಬಿ ನಡೆಸಿದ್ದರು.

ಒಬಾರಿಗೆ ಬೆಂಬಲ ಸೂಚಿಸುತ್ತಾ ರಿಚರ್ಡ್ಸನ್, ಒಬಾಮ ಓರ್ವ ಉತ್ತಮ ಹಾಗೂ ಐತಿಹಾಸಿಕ ಅಧ್ಯಕ್ಷರಾಗಲಿದ್ದು, ತಮಗೆ ಅಗತ್ಯವಾಗಿರುವ ಬದಲಾವಣೆಯನ್ನು ಅವರು ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತನ್ನ ಪ್ರಕಾರ ಒಬಾಮ ಓರ್ವ ಅಪರೂಪದ ನಾಯಕನಾಗಿದ್ದು, ರಾಷ್ಟ್ರವನ್ನು ಒಟ್ಟು ತರಲು ಮತ್ತು ವಿಶ್ವದಲ್ಲಿ ಅಮೆರಿಕದ ನೈತಿಕ ನಾಯಕತ್ವವನ್ನು ಪುನಃಸ್ಥಾಪಿಸಲು ಸಮರ್ಥರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತಿಚಿಗಿನ ಪ್ರತಿನಿಧಿಗಳ ತುಲನೆಯ ಪ್ರಕಾರ ಒಬಾಮ 1,610 ಪ್ರತಿನಿಧಿಗಳಿಂದ ಮುನ್ನಡೆ ಸಾಧಿಸಿದ್ದರೆ, ಕ್ಲಿಂಟನ್ 1,496ರಲ್ಲಿ ಗೆಲುವು ಪಡೆದಿದ್ದಾರೆ. ಅಗಸ್ಟ್‌ನಲ್ಲಿನ ಡೆಮೊಕ್ರೇಟಿಕ್ ಪಕ್ಷದ ಅಧಿವೇಶನದಲ್ಲಿ ಅಧ್ಯಕ್ಷೀಯ ನಾಮನಿರ್ದೇಶನವನ್ನು ಜಯಿಸಲು ಓರ್ವ ಅಭ್ಯರ್ಥಿ 2,025 ಪ್ರತಿನಿಧಿಗಳನ್ನು ಹೊಂದಿರಬೇಕು.

ಎಪ್ರಿಲ್ 22ರಂದು ಅತಿ ದೊಡ್ಡ ರಾಜ್ಯವಾದ ಪೆನ್ನ್ಸಿಲ್ವೆನಿಯಾದಲ್ಲಿ ಈರ್ವ ಆಭ್ಯರ್ಥಿಗಳು ಮುಖಾಮುಖಿಯಾಗಲಿದ್ದಾರೆ. ಈ ರಾಜ್ಯ 158 ಪ್ರತಿನಿಧಿಗಳನ್ನು ಹೊಂದಿದೆ.
ಮತ್ತಷ್ಟು
ಜನಾಂಗೀಯ ನಿಂದನೆ ವಿರುದ್ಧ ಹೋರಾಟಕ್ಕೆ ಬಾನ್ ಕರೆ
ಭಾರತೀಯ ಕಾರ್ಮಿಕರಿಗೆ ಕಾಯುತ್ತಿರುವ ರೊನೇನ್ ಸೇನ್
ಟಿಬೇಟಿಯನ್‌ರನ್ನು ತುಳಿಯುತ್ತಿರುವ ಚೀನಾ : ಪೆಲೋಸಿ
ವಿರೋಧ ಪಕ್ಷದ ನಾಯಕಿಯಾಗಿ ವ್ಯಾನ್
ಪಾಕ್ ಪ್ರಧಾನಿ ಹುದ್ದೆ ನಿರ್ಧಾರ: ಪಿಪಿಪಿ
ಟಿಬೆಟ್ : ಪ್ರತಿಭಟನೆಗಾರರು ಶರಣು