ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಬೆಟ್: ಹಿಂಸಾಚಾರದಲ್ಲಿ 18 ಸಾವು
ಬೌದ್ಧ ಸನ್ಯಾಸಿಗಳ ನೇತೃತ್ವದಲ್ಲಿ ಟಿಬೆಟ್‌ನ ಲಾಸಾದಲ್ಲಿ ಕಳೆದ ಶುಕ್ರವಾರ ನಡೆದ ದೊಂಬಿಯಲ್ಲಿ 18 ನಾಗರಿಕರು ಮತ್ತು ಓರ್ವ ಪೊಲೀಸ್ ಅಧಿಕಾರಿ ಸತ್ತಿದ್ದಾರೆ ಎಂದು ಚೀನಾ ತಿಳಿಸಿದೆ. ಈ ಮಂಚೆ ಚೀನಾ ಸಾವಿನ ಸಂಖ್ಯೆಯನ್ನು 13 ಎಂದು ಹೇಳಿತ್ತು.

ಟಿಬೆಟ್‌ನ ಪ್ರಾದೇಶಿಕ ಸರಕಾರವನ್ನು ಉಲ್ಲೇಖಿಸುತ್ತಾ ಚೀನಾದ ಸುದ್ಧಿ ಸಂಸ್ಥೆ, ಈ ಹಿಂಸಾಚಾರದಲ್ಲಿ 241 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಇದರಲ್ಲಿ 23 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಓರ್ವ ಪೊಲೀಸ್ ಅಧಿಕಾರಿ ಸಾವಿಗೀಡಾಗಿದ್ದಾನೆ ಎಂದು ತಿಳಿಸಿದೆ.

ನಾಗರಿಕ ಗಾಯಾಳುಗಳ ಸಂಖ್ಯೆಯೂ 325ರಿಂದ 382ಕ್ಕೆ ವೃದ್ಧಿಯಾಗಿದೆ. ಇದರಲ್ಲಿ 58 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ.

ಚೀನಾ ಆಡಳಿತ ವಿರುದ್ಧ ಲಾಸಾದಲ್ಲಿ ನಡೆದ ಅತ್ಯಂತ ಭೀಕರ ಪ್ರತಿಭಟನೆ, ಸಿಚುವಾನ್ ಮತ್ತು ಗನ್ಸು ಪ್ರಾಂತ್ಯಗಳಿಗೆ ವ್ಯಾಪಿಸಿತ್ತು. ಪ್ರತಿಭಟನಾಕಾರರು ಕಟ್ಟಡ, ಶಾಲೆ ವಾಹನ ಮತ್ತು ಅಂಗಡಿ ಮುಗ್ಗಟ್ಟುಗಳಿಗೆ ಬೆಂಕಿ ಹಚ್ಚಿ ಅಪಾರ ಹಾನಿ ಮಾಡಿದರು. ಇದರಿಂದ ಸುಮಾರು 34.59 ದಶಲಕ್ಷ ಡಾಲರ್ ನಷ್ಟದ ಅಂದಾಜು ಮಾಡಲಾಗಿದೆ.

ಈ ದೊಂಬಿಯಲ್ಲಿ ಅಪರಾಧ ಎಸಗಿದ ಒಟ್ಟು 183 ಪ್ರತಿಭಟನಾಕಾರರು ಈವರೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಶಿಸ್ತು ಕ್ರಮವನ್ನು ತೀವ್ರಗೊಳಿಸಿದ ಚೀನಾ, ಕಲಹ ಪೀಡಿತ ಟಿಬೆಟ್‌ಗೆ ಹೆಚ್ಚಿನ ಸೈನಿಕರನ್ನು ಕಳುಹಿಸಿದೆ.

ಹಿಂಸಾಚಾರ ಉದ್ಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಎಂಬಂತೆ ಚೀನಾ, ಭಾನುವಾರದಂದು ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿನ ಅಬ ಕೌಂಟಿಯಲ್ಲಿ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಗುಂಡಿನ ದಾಳಿ ನಡೆಸಿದ್ದು, ನಾಲ್ಕು ಮಂದಿ ಗಾಯಕ್ಕೊಳಗಾಗಿರುವ ಬಗ್ಗೆ ಒಪ್ಪಿಕೊಂಡಿದೆ.
ಮತ್ತಷ್ಟು
ಒಬಾಮಾಗೆ ರಿಚರ್ಡ್ಸನ್ ಬೆಂಬಲ
ಜನಾಂಗೀಯ ನಿಂದನೆ ವಿರುದ್ಧ ಹೋರಾಟಕ್ಕೆ ಬಾನ್ ಕರೆ
ಭಾರತೀಯ ಕಾರ್ಮಿಕರಿಗೆ ಕಾಯುತ್ತಿರುವ ರೊನೇನ್ ಸೇನ್
ಟಿಬೇಟಿಯನ್‌ರನ್ನು ತುಳಿಯುತ್ತಿರುವ ಚೀನಾ : ಪೆಲೋಸಿ
ವಿರೋಧ ಪಕ್ಷದ ನಾಯಕಿಯಾಗಿ ವ್ಯಾನ್
ಪಾಕ್ ಪ್ರಧಾನಿ ಹುದ್ದೆ ನಿರ್ಧಾರ: ಪಿಪಿಪಿ