ಎಪ್ರಿಲ್ 10ರ ಸಂಸತ್ ಚುನಾವಣೆಗಾಗಿ ತಮ್ಮ ಪಕ್ಷದ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ ಮಾವೋವಾದಿ ಮುಖ್ಯಸ್ಥ ಪ್ರಚಂಡ, ಒಂದು ವೇಳೆ ತಾವು ಅಧ್ಯಕ್ಷನಾದರೆ ಹೊಸ ನೇಪಾಳ ರಾಷ್ಟ್ರ ನಿರ್ಮಾಣದಲ್ಲಿ ಎಲ್ಲಾ ರಾಜಕೀಯ ಗುಂಪುಗಳನ್ನು ಒಟ್ಟಿಗೆ ಕೊಂಡೊಯ್ಯಲಿದ್ದೇನೆ ಎಂಬ ಪ್ರತಿಜ್ಞೆ ಮಾಡಿದ್ದಾರೆ.
ಪಶ್ಚಿಮ ನೇಪಾಳದ ರೊಲ್ಪ ಜಿಲ್ಲೆಯಲ್ಲಿನ ಸ್ಥಳವೊಂದರಲ್ಲಿ ಚುನಾವಣಾ ಪ್ರಚಾರಕಾರ್ಯ ಪ್ರಾರಂಭಿಸಿದ ಪ್ರಚಂಡ ಈ ರೀತಿ ಹೇಳಿದರು.
ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲಿವಾಂಗ್ ರೋಲ್ಪ, ರಾಜತ್ವ ವಿರುದ್ಧದ ಜನರ ಹೋರಾಟದಲ್ಲಿ ನೀವೆಲ್ಲರೂ ಅತಿ ಪ್ರಮುಖ ಪಾತ್ರವಹಿಸಿದ್ದು, ಈಗ ನೀವು ಈ ಶಾಂತಿಪೂರ್ಣ ಯುದ್ಧದಲ್ಲಿ ಇಂತಹುದೇ ಪಾತ್ರವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲರ ನೇಪಾಳಿ ಕಾಂಗ್ರೆಸ್ ಪ್ರಚಂಡ ವಿರುದ್ಧ ಬಿಂಮ್ ಕುಮಾರಿ ಬುದಮಗರ್‌ನ್ನು ಕಣಕ್ಕಿಳಿಸಿದ್ದಾರೆ. ಇವರು ಮಾವೋವಾದಿ ಮುಖ್ಯಸ್ಥನ ಎದುರು ಸ್ಪರ್ಧಿಸುತ್ತಿರುವ ಏಕ ಮಾತ್ರ ಮಹಿಳೆಯಾಗಿದ್ದಾರೆ.
ಮಗಾರ್ ಸಮುದಾಯದವರಾಗಿರುವ ಬುದಮಗರ್ ಪ್ರಚಂಡರಿಗೆ ಬಲವಾದ ಸವಾಲು ಒಡ್ಡುವ ನಿರೀಕ್ಷೆ ಇದೆ. ಪ್ರಚಂಡ ಕಠ್ಮಂಡು ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ.
|