ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯೂಸುಫ್ ರಾಜಾ ಪಾಕ್ ಪ್ರಧಾನಿ?
ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಉಪಾಧ್ಯಕ್ಷ ಯೂಸುಪ್ ರಾಜಾ ಗಿಲಾನಿಯನ್ನು ಪ್ರಧಾನ ಮಂತ್ರಿ ಹುದ್ದೆಗಾಗಿನ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಯೂಸುಪ್ ರಾಜಾ ಗಿಲಾನಿ ನಮ್ಮ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪ್ರಕಟಿಸಿದ ಪಿಪಿಪಿ ವಕ್ತಾರ ಪಾರಾತುಲ್ಹಾ ಬಾಬರ್, ಈ ದಿಶೆಯಲ್ಲಿ ಪಕ್ಷದ ಒಳಗೆ ಹಾಗೂ ತನ್ನ ಮಿತ್ರ ಪಕ್ಷಗಳ ಜತೆ ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಘೋಷಣೆಯ ನಂತರ ಮಾತನಾಡಿದ ಗಿಲಾನಿ, ಇಂತಹ ದೊಡ್ಡ ಸಾವಲನ್ನು ಎದುರಿಸಲು ಹಾಗೂ ದೇಶಕ್ಕಾಗಿ ಪ್ರಾಯೋಗಿಕವಾಗಿ ಏನನ್ನಾದರು ಮಾಡುವಲ್ಲಿ ತನಗೆ ಆಶಿರ್ವದಿಸುವಂತೆ ರಾಷ್ಟ್ರದ ಜನತೆಯಲ್ಲಿ ಮನವಿ ಮಾಡಿದರು.

ಇದಕ್ಕೂ ಮುಂಚೆ ಪ್ರಧಾನ ಮಂತ್ರಿ ಅಭ್ಯರ್ಥಿ ಹೆಸರನ್ನು ಭುಟ್ಟೋ ಹಾಗೂ ಜರ್ದಾರಿ ಪುತ್ರ ಮತ್ತು ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಬಿಲಾವಲ್‌ರ ಅನಾರೋಗ್ಯದ ಕರಾಣ ಇದನ್ನು ಕೈಬಿಡಲಾಯಿತು.

ಮಾರ್ಚ್ 24 ರಂದು ಸಂಸತ್ ಅಧಿಕೃತ ಚುನಾವಣೆ ನಡೆಸಿದ ನಂತರ, ಹೊಸ ಪ್ರಧಾನಿ ಮುಷರಫ್‌ರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪಂಜಾಬ್‌ ಪ್ರಾಂತ್ಯದ ಗಿಲಾನಿ ಮೊದಲ ಸೆರೈಕಿ ಮಾತನಾಡುವ ಪ್ರಧಾನಿಯಾಗಲಿದ್ದಾರೆ. ಆದರೆ ಈ ಕಡೆ ಗಿಲಾನಿ ನಾಮನಿರ್ದೇಶನ ಪಾಹಿಂರಿಗೆ ಸ್ಪಷ್ಟ ಮುಖಭಂಗವಾಗಿದೆ. ಪಾಹಿಂ ಪ್ರಾರಂಭದಲ್ಲಿ ಪ್ರಧಾನಿ ಹುದ್ದೆಗಾಗಿನ ಮುಂಚೂಣಿಯ ಅಭ್ಯರ್ಥಿಯಾಗಿದ್ದರು.

ಗಿಲಾನಿ ಹೆಸರು ಘೋಷಿಸಿದ ಬಳಿಕ ಮಾತನಾಡಿದ ಪಾಹಿಂ ತಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಅವರ ಯಶಸ್ಸಿಗೆ ಪ್ರಾರ್ಥಿಸುತ್ತೇನೆ ಎಂದು ತಿಳಿದ್ದಾರೆ. ಮತ್ತು ಇದೇ ವೇಳೆ ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಲಂಕಾ ಯುದ್ದ ಹಡುಗು ಸ್ಫೋಟ :ನಾವಿಕರು ಕಣ್ಮರೆ
ನೇಪಾಳದಲ್ಲಿ ಬಿರುಸಿನ ಚುನಾವಣೆ ಪ್ರಚಾರ
ಟಿಬೆಟ್: ಹಿಂಸಾಚಾರದಲ್ಲಿ 18 ಸಾವು
ಒಬಾಮಾಗೆ ರಿಚರ್ಡ್ಸನ್ ಬೆಂಬಲ
ಜನಾಂಗೀಯ ನಿಂದನೆ ವಿರುದ್ಧ ಹೋರಾಟಕ್ಕೆ ಬಾನ್ ಕರೆ
ಭಾರತೀಯ ಕಾರ್ಮಿಕರಿಗೆ ಕಾಯುತ್ತಿರುವ ರೊನೇನ್ ಸೇನ್