ತೈವಾನ್ ಪ್ರತಿಪಕ್ಷದ ಅಭ್ಯರ್ಥಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಚೀನಾದ ಜತೆ ಆರ್ಥಿಕ ಬಾಂಧವ್ಯ ವೃದ್ಧಿಗೆ ಭರವಸೆ ನೀಡಿದ ನೂತನ ಅಧ್ಯಕ್ಷ ಮಾ ಯಿಂಗ್ ಜಿಯೊ ನೆರೆಯ ಕಮ್ಯುನಿಸ್ಟ್ ದೈತ್ಯ ರಾಜಕೀಯವಾಗಿ ತಮ್ಮ ದ್ವೀಪವನ್ನು ನುಂಗುವುದರಿಂದ ಪಾರು ಮಾಡುವುದಾಗಿ ಹೇಳಿದರು.
ಮಾ ಯಿಂಗ್ ಬೆಂಬಲಿಗರು ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿದರು ಮತ್ತು ಬಾವುಟಗಳನ್ನು ಹಾರಿಸಿದರು.
ಜನತೆ ಭ್ರಷ್ಟವಲ್ಲದ ಸ್ವಚ್ಛ ಸರ್ಕಾರವನ್ನು ಬಯಸಿದ್ದಾರೆಂದು ಹೇಳಿದ ಮಾ ಅವರು ಉತ್ತಮ ಆರ್ಥಿಕತೆ ಬಯಸುತ್ತಾರೆಂದು ನುಡಿದರು. ತೈವಾನ್ ಪ್ರದೇಶದಲ್ಲಿ ಜನತೆ ಶಾಂತಿಯನ್ನು ಬಯಸುತ್ತಾರೆಂದು ಅವರು ಹೇಳಿದರು.ರಾಜಧಾನಿ ತೈಪಿಯ ಇನ್ನೊಂದು ಕಡೆ ಆಡಳಿತಾರೂಢ ಪಕ್ಷದ ಅಭ್ಯರ್ತಿ ಫ್ರಾಂಕ್ ಸಯಿ ಪ್ರಚಾರ ಕಚೇರಿಯಲ್ಲಿ ತಮ್ಮ ಅಭ್ಯರ್ಥಿಯ ಸೋಲಿಗಾಗಿ ಗುಂಪಿನಲ್ಲಿ ನೆರೆದಿದ್ದ ಜನರು ಅತ್ತರು.
ನನಗಾಗಿ ಅಳಬೇಡಿ ಎಂದು ಸಾಂತ್ವನ ಹೇಳಿದ ಸಯಿ ನಾವು ಚುನಾವಣೆ ಸೋತಿದ್ದರೂ. ಪ್ರಜಾಪ್ರಭುತ್ವದ ಜ್ಯೋತಿ ಆರುವುದಿಲ್ಲ ಎಂದು ಪ್ರಜಾತಂತ್ರ ಪ್ರಗತಿಪರ ಪಕ್ಷದ ಸಯಿ ಹೇಳಿದರು.
|