ಟಿಬೆಟ್ ಪ್ರತಿಭಟನಾಕಾರರ ಪ್ರತ್ಯೇಕತಾವಾದಿ ಹಿಂಸಾಚಾರವನ್ನು ನಿಗ್ರಹಿಸಲು ಚೀನಾ ದೇಶ ತೆಗೆದುಕೊಂಡ ನಿಲುವಿಗೆ ನೇಪಾಳ ಮಾವೋವಾದಿಗಳ ಮುಖಂಡ ಪ್ರಚಂಡ ಸಮರ್ಥಿಸಿಕೊಂಡಿದ್ದಾರೆ.
ಟಿಬೆಟ್ ದೇಶ ಚೀನಾದ ಅಡಳಿತಕ್ಕೆ ಒಳಪಟ್ಟಿರುವುದರಿಂದ ಪ್ರತ್ಯೇಕ ರಾಷ್ಟ್ರ್ರಕ್ಕಾಗಿ ಆಗ್ರಹಿಸುವುದು ಕಾನೂನು ಬಾಹಿರವಾಗುತ್ತದೆ. ಹಿಂಸಾಚಾರವನ್ನು ನಿಯಂತ್ರಿಸುವುದು ಚೀನಾ ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ಪ್ರಚಂಡ ತಿಳಿಸಿದ್ದಾರೆ.
ಟಿಬೆಟ್ ಚೀನಾ ದೇಶದ ಅವಿಭಾಜ್ಯ ಅಂಗವಾಗಿದೆ ಎನ್ನುವುದು ನಾವೆಲ್ಲಾ ತಿಳಿದಿರುವ ಸಂಗತಿ. ಚೀನಾ ಭಾರಿ ಹಿಂಸಾಚಾರವೆಸಗುತ್ತಿದೆ ಎನ್ನುವ ಆರೋಪದಲ್ಲಿ ಹುರಳಿಲ್ಲವೆಂದು ಹೇಳಿದ್ದಾರೆ.
|