ಶತಮಾನದ ರಾಜಾಧಿಪತ್ಯವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ಸರಕಾರ ಸ್ಥಾಪನೆಗಾಗಿ ಹಿಮಾಲಯ ರಾಷ್ಟ್ರವಾದ ಭೂತಾನ್‌ನಲ್ಲಿ ಇಂದು ಚುನಾವಣೆಗಾಗಿ ಐತಿಹಾಸಿಕ ಮತದಾನ ನಡೆಯುತ್ತಿದೆ.
ದೇಶದಲ್ಲಿರುವ 47 ಸ್ಥಾನಗಳಿಗಾಗಿ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಹಾಗೂ ಭೂತಾನ್ ಯುನೈಟೆಡ್ ಪಾರ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿವೆ.
ದೇಶದ ಯುವರಾಜ್ ಜಿಗ್ಮೆ ಖೇಸರ್ ನಾಮ್‌ಗೆಲ್ ವಾಂಗ್‌ಚುಕ್ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವೀಧರರಾಗಿದ್ದು ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಚುನಾವಣೆ ನಡೆಸುವಲ್ಲಿ ಶ್ರಮವಹಿಸಿದ್ದು ನ್ಯಾಯಯುತವಾಗಿ ಮತದಾನ ನಡೆಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಚುನಾವಣೆ ಕೇವಲ ಎರಡು ಪಕ್ಷಗಳ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಲ್ಲ. ತ್ಯಾಗ ಮತ್ತು ಕಠಿಣ ಪರಿಶ್ರಮದ ಭೂತಾನ್ ಜನತೆಗೆ ಪ್ರಜಾಪ್ರಭುತ್ವದ ಸರಕಾರದ ಸ್ಥಾಪನೆಗಾಗಿ ಎಂದು ಹೇಳಿದ್ದಾರೆ.
|