ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪ್ರಧಾನಿ ಅಭ್ಯರ್ಥಿ ಯೂಸೂಫ್ ರಾಜಾ ಗಿಲಾನಿ ಪ್ರಧಾನಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಹಿರಿಯ ಸಂಸದರೊಂದಿಗೆ ಸಂಸತ್ತಿಗೆ ಆಗಮಿಸಿದ 55ರ ಹರೆಯದ ಗಿಲಾನಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ವಕ್ತಾರರು ತಿಳಿಸಿದ್ದಾರೆ.
ಪ್ರಧಾನಿ ಸ್ಥಾನಕ್ಕೆ ಗಿಲಾನಿಯನ್ನು ಹೊರತುಪಡಿಸಿ ಮುಷರಫ್ ಬೆಂಬಲಿತ ಪಾಕಿಸ್ತಾನ ಮುಸ್ಲಿಮ್ ಲೀಗ್ (ಕ್ಯೂ)ನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಕೂಡಾ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಮುತ್ತಾಹಿದಾ ಖ್ವೌಮಿ ಮೂವ್‌ಮೆಂಟ್ ಪಕ್ಷದ ನಾಯಕರಾದ ಫಾರೂಖ್ ಸತ್ತಾರ್ ಅವರ ಸ್ಪರ್ಧೆಯನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಪಿಎಂಲ್(ಕ್ಯೂ) ಮುಖ್ಯಸ್ಥ ಚೌಧರಿ ಶೌಜಾತ್ ಹುಸೇನ್ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಅವರಿಗೆ ಸ್ಪರ್ಧಿಸಲು ಅನುಮತಿ ನೀಡಿದ್ದಾರೆ.
|