ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ: ಕೈದಾ ವಿರುದ್ದದ ದಾಳಿಗೆ ಮುಷರಫ್ ಮೌನ ಒಪ್ಪಿಗೆ
ಪಾಕಿಸ್ತಾನದ ಗಡಿಭಾಗಗಳಲ್ಲಿರುವ ಆಲ್‌ಕೈದಾ ಉಗ್ರರ ಅಡಗುತಾಣಗಳ ಮೇಲೆ ಪೈಲಟ್‌ರಹಿತ ವಿಮಾನಗಳ ಮೂಲಕ ಅಮೆರಿಕ ದಾಳಿ ನಡೆಸಲು ಮುಫರಫ್ ಅಡಳಿತ ಮೌನ ಒಪ್ಪಿಗೆ ಸೂಚಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಜನೆವರಿಯಿಂದ ಸಿಐಎಆಧೀನದ ಕಾರ್ಯಾಚರಣೆಯಲ್ಲಿ ದಕ್ಷಿಣ ವಜೀರಿಸ್ತಾನದ ತೂಗ್ ಗ್ರಾಮದಲ್ಲಿ ನಡೆದ ದಾಳಿಯಲ್ಲಿ 20 ಉಗ್ರರು ಹತರಾಗಿರುವ ಘಟನೆ ಸೇರಿದಂತೆ ಮೂರು ಶಂಕಿತ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ ಎನ್ನಲಾಗಿದೆ.

ಅಮೆರಿಕದ ಅಧಿಕಾರಿಗಳು ಹಾಗೂ ಪಾಕಿಸ್ತಾನದ ಉನ್ನತ ಅಧಿಕಾರಿಗಳು ಪರಸ್ಪರ ಸಹಯೋಗದೊಂದಿಗೆ ಉಗ್ರರನ್ನು ಸದೆಬಡೆಯಲು ಯೋಜನೆಗಳನ್ನು ರೂಪಿಸಿದ್ದು, ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಲು ಸಿದ್ದತೆ ನಡೆಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ ವಿಭಿನ್ನ ರೀತಿಯ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಕ್ ರಾಷ್ಟ್ರಾಧ್ಯಕ್ಷ ಮುಫರಫ್ ಹಾಗೂ ಸೇನಾ ಮುಖ್ಯಸ್ಥ ಅಶಫಾಕ್ ಖಯಾನಿ ದೇಶದ ಆಂತರಿಕತೆಗೆ ಬೆದರಿಕೆಯಿಂದಾಗಿ ಅಮೆರಿಕ ಸೇನೆಗೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಲು ಮೌನ ಸಮ್ಮತಿ ಸೂಚಿಸಿದ್ದಾರೆ ಎಂದು ಸಿಐಎ ತಜ್ಞ ಬ್ರೂಸ್ ರೈಡಲ್ ತಿಳಿಸಿದ್ದಾರೆ.




ಮತ್ತಷ್ಟು
ಪ್ರಧಾನಿ ಅಭ್ಯರ್ಥಿ: ಗಿಲಾನಿಯಿಂದ ನಾಮಪತ್ರ ಸಲ್ಲಿಕೆ
ಭೂತಾನ್:ಪ್ರಜಾಪ್ರಭುತ್ವಕ್ಕಾಗಿ ಚುನಾವಣೆ
ಟಿಬೆಟ್: ಚೀನಾ ನೀತಿಗೆ ಪ್ರಚಂಡ ಸಮರ್ಥನೆ
ರೈಸ್- ಮುಖರ್ಜಿ ಭೇಟಿ ಅಣು ಒಪ್ಪಂದ ಮಾತುಕತೆ
ತೈವಾನ್‌: ನೂತನ ಅಧ್ಯಕ್ಷರಾಗಿ ಮಾಯಿಂಗ್
ಪ್ರಜಾಪ್ರಭುತ್ವ ಸ್ಥಾಪನೆಗೆ ಕ್ಷಣಗಣನೆ: ಮುಷರಫ್