ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಮಾಣ ವಚನ ಸಮಾರಂಭಕ್ಕೆ ಜರ್ದಾರಿ, ಷರೀಫ್ ಇಲ್ಲ
ಮಂಗಳವಾರ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಪ್ರಧಾನಿ ಅಭ್ಯರ್ಥಿ ಯುಸೂಫ್ ರಾಜಾ ಗಿಲಾನಿ ಅವರಿಗೆ ಪ್ರಮಾಣ ವಚನ ಭೋದಿಸಲಿದ್ದು. ಪ್ರಮಾಣ ವಚನ ಸಮಾರಂಭದಲ್ಲಿ ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಸೀಫ್ ಅಲಿ ಜರ್ದಾರಿ ಮತ್ತು ಪಾಕಿಸ್ತಾನ ಮುಸ್ಲೀಂ ಲೀಗ್ ನವಾಜ ಬಣದ ಮುಖ್ಯಸ್ಥ ನವಾಜ್ ಷರೀಫ್ ಅವರು ಬರುವುದಿಲ್ಲ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ನಾಯಕರು ನಾವುಗಳು ಪ್ರಧಾನಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸುತ್ತಿಲ್ಲ. ಅಧ್ಯಕ್ಷರ ನಿವಾಸದಲ್ಲಿ ಇರುವ ಪರ್ವೇಜ್ ಮುಷರಫ್ ನಮ್ಮ ಪಾಲಿಗೆ ಅಪರಿಚಿತ ವ್ಯಕ್ತಿ ಹಾಗೂ ಸಂವಿಧಾನ ಬದ್ಧವಾಗಿ ಪಾಕಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ ಎಂದು ಹೇಳಿದ್ದಾರೆ.

ನ್ಯಾಷನಲ್ ಅಸೆಂಬ್ಲಿ ಗಿಲಾನಿ ಅವರನ್ನು ಅವಿರೋಧವಾಗಿ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದ ಮರುಕ್ಷಣವೇ ಬಂಧನದಲ್ಲಿದ್ದ 60ಕ್ಕೂ ಹೆಚ್ಚು ನ್ಯಾಯಾಧೀಶರನ್ನು ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿದ್ದು. ಪರ್ವೇಜ್ ಮುಷರಫ್ ಆಡಳಿತಾವಧಿಯಲ್ಲಿ 60ಕ್ಕೂ ಹೆಚ್ಚು ನ್ಯಾಯಾಧೀಶರನ್ನು ಪದಚ್ಯುತಗೊಳಿಸಲಾಗಿತ್ತು.
ಮತ್ತಷ್ಟು
ಅಮೆರಿಕ: ಕೈದಾ ವಿರುದ್ದದ ದಾಳಿಗೆ ಮುಷರಫ್ ಮೌನ ಒಪ್ಪಿಗೆ
ಪ್ರಧಾನಿ ಅಭ್ಯರ್ಥಿ: ಗಿಲಾನಿಯಿಂದ ನಾಮಪತ್ರ ಸಲ್ಲಿಕೆ
ಭೂತಾನ್:ಪ್ರಜಾಪ್ರಭುತ್ವಕ್ಕಾಗಿ ಚುನಾವಣೆ
ಟಿಬೆಟ್: ಚೀನಾ ನೀತಿಗೆ ಪ್ರಚಂಡ ಸಮರ್ಥನೆ
ರೈಸ್- ಮುಖರ್ಜಿ ಭೇಟಿ ಅಣು ಒಪ್ಪಂದ ಮಾತುಕತೆ
ತೈವಾನ್‌: ನೂತನ ಅಧ್ಯಕ್ಷರಾಗಿ ಮಾಯಿಂಗ್