ಹಿಮಾಲಯದ ಮಡಿಲಲ್ಲಿರುವ ಭೂತಾನ್ ದೇಶದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆದು ರಾಯಲಿಸ್ಟ್ ಪಕ್ಷಕ್ಕೆ ಹೆಚ್ಚಿನ ಬಹುಮತ ಲಭಿಸಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಭೂತಾನದ ಶಾಂತಿ ಮತ್ತು ಅಭಿವೃದ್ಧಿ ಪಕ್ಷ 47 ಸೀಟುಗಳಲ್ಲಿ 44 ಸೀಟುಗಳಲ್ಲಿ ಗೆಲುವು ಸಾಧಿಸಿದ್ದು, ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯುಕ್ತರಾದ ಕುನ್‌ಜಾಂಗ್ ವಾಂಗ್‌ಡಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ 320,000 ನೋಂದಾಯಿತ ಮತದಾರರಲ್ಲಿ ಶೇ 79 ರಷ್ಟು ಜನ ಮತ ಚಲಾಯಸಿದ್ದು ಶಾಂತಿಯಿಂದ ಚುನಾವಣೆ ಮುಕ್ತಾಯವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದ ಚುನಾವಣೆಯಿಂದಾಗಿ ಶತಮಾನದ ಅವಧಿಯ ರಾಜ್ಯಾಡಳಿತಕ್ಕೆ ಅಂತ್ಯ ಹಾಡಿದಂತಾಗಿದೆ. 1999ರಿಂದ ಮಾತ್ರ ದೇಶದಲ್ಲಿ ಟೆಲಿವಿಜನ್ ಹಾಗೂ ಇಂಟರ್‌ನೆಟ್‌ಗಳಿಗೆ ಅವಕಾಶ ನೀಡಲಾಯಿತು
ಸ್ವತಃ ಭೂತಾನ ದೇಶದ ರಾಜ ರಾಜಪ್ರಭುತ್ವ ಬೇಡ ಪ್ರಜಾಪ್ರಭುತ್ವ ಜಾರಿಗೆ ಬರಲಿ ಎಂದು ಒತ್ತಡ ಹೇರಿರುವುದು ಅಪರೂಪವಾಗಿದೆ ಎಂದು ಜಾಗತಿಕ ನಾಯಕರ ಪ್ರಶಂಸೆಗೆ ಪಾತ್ರವಾಗಿದೆ.
|