ಟಿಬೆಟ್‌ನಲ್ಲಿ ನಡೆದ ಚೀನಾ ಹಿಂಸಾಚಾರ ಕುರಿತಂತೆ ಅಮೆರಿಕ ಸಂಸತ್ತಿನ ಸಭಾಧ್ಯಕ್ಷೆ ನ್ಯಾನ್ಸಿ ಪೆಲ್ಸೊಯಿ ಭಾರತದಲ್ಲಿ ನೀಡಿದ ಹೇಳಿಕೆಯಿಂದಾಗಿ ಭಾರತ-ಅಮೆರಿಕ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಿಲ್ಲವೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೈಸ್ ತಿಳಿಸಿದ್ದಾರೆ.
ಭಾರತ-ಅಮೆರಿಕ ಬಾಂಧವ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲವೆಂದು ಸ್ಪಷ್ಟಪಡಿಸಿದ ವಿದೇಶಾಂಗ ಕಾರ್ಯದರ್ಶಿ ರೈಸ್ ಭಾರತ ಅಮೆರಿಕದ ಉತ್ತಮ ಸ್ನೆಹಿತ ಎಂದು ಬಣ್ಣಿಸಿದರು.
ಅಮೆರಿಕ ಸಂಸತ್ತಿನ ಸಭಾಪತಿ ನ್ಯಾನ್ಸಿ ಪೆಲ್ಸೊಯಿ ಟಿಬೆಟ್ ಧಾರ್ಮಿಕ ನಾಯಕ ದಲೈಲಾಮಾ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಯಾವುದೇ ವಿಶೇಷವಿಲ್ಲ. ಕಳೆದ ಬಾರಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಕೂಡಾ ದಲೈಲಾಮಾ ಅವರೊಂದಿಗೆ ಮಾತುಕತೆ ನಡೆಸಿರುವುದನ್ನು ಸ್ಮರಿಸಬಹುದು ಎಂದು ರೈಸ್ ಹೇಳಿದ್ದಾರೆ.
ದಲೈಲಾಮಾ ಧಾರ್ಮಿಕ ಗುರುವಾಗಿದ್ದರಿಂದ ಸಭಾಪತಿ ಗೌರವಿಸಿದ್ದಾರೆ. ಅಧ್ಯಕ್ಷ ಜಾರ್ಜ್ ಬುಷ್ ಕೂಡಾ ಗೌರವಿಸುತ್ತಾರೆ.ಚೀನಾ ದೇಶದ ಸರಕಾರ ಕೂಡಾ ಅವರ ಸಲಹೆಗಳನ್ನು ಗೌರವಿಸಿದಲ್ಲಿ ಒಳ್ಳೆಯದು ಎಂದು ರೈಸ್ ತಿಳಿಸಿದ್ದಾರೆ.
|