ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂತಾನ್ ಚುನಾವಣೆ ಸ್ವಾಗತಾರ್ಹ -ಅಮೆರಿಕ
ಭೂತಾನ್ ದೇಶದಲ್ಲಿ ರಾಜ್ಯಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಸಾಗಲು ನಡೆದ ಚುನಾವಣೆಯಲ್ಲಿ ಭಾಗವಹಿಸಿದ ಮತದಾರರಿಗೆ ಅಮೆರಿಕ ಅಭಿನಂದಿಸಿದ್ದು, ಪ್ರಜಾಪ್ರಭುತ್ವದ ಧನಾತ್ಮಕ ಚಾಲನೆಯಾಗಿದೆ ಎಂದು ಅಮೆರಿಕ ಸಂತಸ ವ್ಯಕ್ತಪಡಿಸಿದೆ.

ಮಾರ್ಚ್ 24 ರಂದು ನಡೆದ ಸಂಸದೀಯ ಚುನಾವಣೆಯನ್ನು ಶಾಂತಿಪೂರ್ವಕವಾಗಿ ಯಶಸ್ವಿಯಾಗಿ ನಡೆಸಲು ಕಾರಣಿಭೂತರಾದ ಜನತೆಗೆ ಅಮೆರಿಕ ಅಭಿನಂದಿಸಿದೆ ಎಂದು ವಕ್ತಾರ ಸೀನ್ ಮ್ಯಾಕ್ ಕೊರ್ಮ್ಯಾಕ್ ತಿಳಿಸಿದ್ದಾರೆ.

ಭೂತಾನ್‌ನಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹಾಗೂ ಅಮೆರಿಕದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪದವೀಧರ ನೇತೃತ್ವದ ಪಕ್ಷ 47 ಕ್ಷೇತ್ರಗಳಲ್ಲಿ 44 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ವಿಜಯ ಸಾಧಿಸಿದೆ.

ಚುನಾವಣೆಯಲ್ಲಿ ಭೂತಾನ್ ಯುನೈಟೆಡ್ ಪಾರ್ಟಿ ಕೇವಲ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಹೀನಾಯ ಸೋಲನುಭವಿಸಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಭಾರತ-ಅಮೆರಿಕ ಬಾಂಧವ್ಯಕ್ಕೆ ಧಕ್ಕೆಯಿಲ್ಲ-ರೈಸ್
ಭೂತಾನ್: ರಾಯಲಿಸ್ಟ್ ಪಾರ್ಟಿಗೆ ಗೆಲುವು
ಪ್ರಮಾಣ ವಚನ ಸಮಾರಂಭಕ್ಕೆ ಜರ್ದಾರಿ, ಷರೀಫ್ ಇಲ್ಲ
ಅಮೆರಿಕ: ಕೈದಾ ವಿರುದ್ದದ ದಾಳಿಗೆ ಮುಷರಫ್ ಮೌನ ಒಪ್ಪಿಗೆ
ಪ್ರಧಾನಿ ಅಭ್ಯರ್ಥಿ: ಗಿಲಾನಿಯಿಂದ ನಾಮಪತ್ರ ಸಲ್ಲಿಕೆ
ಭೂತಾನ್:ಪ್ರಜಾಪ್ರಭುತ್ವಕ್ಕಾಗಿ ಚುನಾವಣೆ